ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಿರೀಕ್ಷೆ ಹುಸಿಯಿಂದ ಆಕ್ರೋಶ

ಮಾನ್ವಿ,ಏ.೦೮- ವಿಧಾನಸಭಾ ಕ್ಷೇತ್ರದ ಚುನಾವಣೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಮಾನ್ವಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎನ್ನುವುದನ್ನು ಕೈ ಹೈಕಮಾಂಡ್ ಮೂರನೇ ಪಟ್ಟಿಯವರೆಗೆ ಕಾಯ್ದಿರಿಸಿದ್ದು ಕ್ಷೇತ್ರದ ಕೈ ನಾಯಕರಲ್ಲಿ ಗೊಂದಲ ಉಂಟಾಗಿರುವ ಕಾರಣ ಶುಕ್ರವಾರ ಸಂಜೆ ಸಭೆ ಮಾಡಿ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಿದಲ್ಲಿ ಮಾತ್ರ ಒಮ್ಮತದಿಂದ ಚುನಾವಣೆ ಮಾಡಲಿದ್ದು ಬಿ.ವಿ ನಾಯಕ ಇವರು ನಮ್ಮ ಕ್ಷೇತ್ರದವರಲ್ಲ. ಆದ್ದರಿಂದ ಮಾಜಿ ಶಾಸಕ ಹಂಪಯ್ಯ ನಾಯಕ ಅಥವಾ ಇನ್ನುಳಿದ ಯಾರಿಗೂ ಕೈ ಟಿಕೆಟ್ ನೀಡಿದರೂ ಕೂಡ ನಾವು ಸರ್ವರೂ ಸಮ್ಮತಿಸುತ್ತೇವೆ ಎಂದು ಕೈ ಮುಖಂಡರು ಹೇಳಿದರು.
ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಕೈ ಪಕ್ಷದಿಂದ ಅರ್ಜಿ ಸಲ್ಲಿಸಿದ ಹಂಪಯ್ಯ ನಾಯಕ, ಶರಣಪ್ಪ ನಾಯಕ, ಲಕ್ಷ್ಮೀದೇವಿ ನಾಯಕ, ವಸಂತ ನಾಯಕ ಇವರುಗಳಲ್ಲಿ ಯಾರಿಗಾದರೂ ಟಿಕೆಟ್ ನೀಡಿ ಎಂದು ನಮ್ಮ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ಇವರುಗಳಿಗೆ ಸ್ಥಳೀಯರಿಗೆ ಕಡ್ಡಾಯವಾಗಿ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿಲಾಗಿದೆ ಎಂದು ಹೇಳಿದ್ದೇವೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೂರಾರು ಕೈ ನಾಯಕರು ಭಾಗವಹಿಸಿದ್ದರು.