ಕಾಂಗ್ರೆಸ್ ಟಿಕೆಟ್:ಬಳ್ಳಾರಿಗೆ ಭರತ್, ಸಿರುಗುಪ್ಪಗೆ ಬಿ.ಎಂ.ನಾಗರಾಜ್, ಹರಪನಹಳ್ಳಿಗೆ ಎನ್.ಕೊಟ್ರೇಶ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ನಿರೀಕ್ಷೆಯಂತೆ ಅಂತೂ ಇಂತೂ ನಾರಾ ಭರತ್ ರೆಡ್ಡಿಗೆ ಬಳ್ಳಾರಿ‌ ನಗರದ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿದೆ.
ಇದರಿಂದಾಗಿ ಹಲವು ರೀತಿ ಊಹಾ ಪೋಹಗಳಿಗೆ ತೆರೆ ಬಿದ್ದಿದೆ. ಇ‌ನ್ನು ಸಿರುಗುಪ್ಪ ಕ್ಷೇತ್ರದಿಂದ ಮಾಜಿ ಶಾಸಕ‌ ಬಿ.ಎಂ.ನಾಗರಾಜ್ ಅವರಿಗೆ ಟಿಕೆಟ್ ದೊರೆತಿದೆ. ಈ  ಬಗ್ಗೆ  ಸಂಜೆವಾಣಿ ಕಳೆದ ವಾರವೇ ಪ್ರಕಟಿಸಿತ್ತು.
ಇನ್ನು ಹರಪನಹಳ್ಳಿ ಕ್ಷೇತ್ರದಿಂದ ಎಂಪಿ ಪ್ರಕಾಶ್ ಕುಟುಂಬವನ್ನು ಹೊರಗಿಟ್ಟು ಪಂಚಮಸಾಲಿ ಸಮಾಜದ ಕೊಟ್ರೇಶ್ ಅವರಿಗೆ ಟಿಕೆಟ್ ಘೋಷಣೆ ಆಗಿದೆ.
ಕಾಂಗ್ರೆಸ್ ಅವಿಭಜಿತ ಬಳ್ಳಾರಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ ಬಿಜೆಪಿ ಮಾತ್ರ ಇನ್ನೂ ಹಗರಿ ಬೊಮ್ಮಹಳ್ಳಿ ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಉಳಿಸಿದೆ.