ಕಾಂಗ್ರೆಸ್ ಟಿಕೆಟ್‌ಗೆ ಯಂಕಣ್ಣ ಯಾದವ್ ಅರ್ಜಿ

ರಾಯಚೂರು.ನ.೧೦- ರಾಯಚೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಯಂಕಣ್ಣ ಯಾದವ ಅವರು ಇಂದು ಅರ್ಜಿ ಸಲ್ಲಿಸಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಮೂಲಕ ವಿಧಾನಸಭಾ ಚುನಾವಣೆಗೆ ತಾವು ಆಕಾಂಕ್ಷಿ ಎನ್ನುವುದನ್ನು ಸ್ಪಷ್ಟವಾಗಿದ್ದು, ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಾ ಸಾಗಿದೆ.