ಕಾಂಗ್ರೆಸ್ ಟಿಕೆಟ್‌ಗಾಗಿ ಹಾಲಿ ಶಾಸಕ ಹೂಲಗೇರಿ- ಎಚ್.ಬಿ.ಮುರಾರಿ ಬಿಗ್ ಫೈಟ್

ದುರುಗಪ್ಪ ಹೊಸಮನಿ: ಸಂಜೆವಾಣಿ
ಲಿಂಗಸುಗೂರ,ಏ.೦೮- ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗುಪ್ತ ಗುಪ್ತ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಈಗಾಗಲೇ ಸ್ಪಷ್ಟವಾಗಿದೆ ಹಾಲಿ ಶಾಸಕ ಡಿ ಎಸ್ ಹೂಲಗೇರಿ ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ರಾಜ್ಯ ಮಾಜಿ ಕಾರ್ಯದರ್ಶಿ ಟಿಕೆಟ್ ಪ್ರಬಲ ಆಕಾಂಕ್ಷಿ ಎಚ್.ಬಿ. ಮುರಾರಿ ಇವರು ಭಾರಿ ಒತ್ತಡ ಹಾಕಿದ ಪರಿಣಾಮವಾಗಿ ಹಾಲಿ ಶಾಸಕರಿಗೆ ಟಿಕೆಟ್ ಕೊಕ್ ಎನ್ನುವ ಪ್ರಶ್ನೆ ಉದ್ಭವಿಸಿದೆ. ಇವರಿಬ್ಬರ ನಡುವೆ ಟಿಕೆಟ್ ಬಿಗ್ ಫೈಟ್ ನಡೆದಿದೆ ಎನ್ನಲಾಗಿದೆ.
ಲಿಂಗಸುಗೂರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಪ್ರಬಲ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬುದು ಈಗಾಗಲೇ ಸಾಕಷ್ಟು ಬಾರಿ ಮಾದಿಗ ಮುಖಂಡರು ಕಾರ್ಯಕರ್ತರು ಹೋರಾಟ ನಡೆಸಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ರಾಜ್ಯ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.
ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್ ಹೂಲಗೇರಿ ಇವರು ಈಗಾಗಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಮೂಲ ಅಸ್ಪುಶ್ಯರಿಗೆ ಎಡಗೈ ಸಮುದಾಯದ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಅದಕ್ಕಾಗಿ ಮೂಲ ಅಸ್ಪುಶ್ಯರಿಗೆ ಪ್ರಾತಿನಿದ್ಯ ನೀಡಿ ಹೋರಾಟಗಾರ ಎಚ್.ಬಿ ಮುರಾರಿ ಇವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಬೇಕು ಎಂಬುದು ಮಾದಿಗ ಸಮುದಾಯದ ಮಹಿಳೆಯರು ಮತ್ತು ಯುವಕರು ಕ್ಷೇತ್ರದ ಜನರು ಆಗ್ರಹವಾಗಿದೆ.
ಕ್ಷೇತ್ರದಲ್ಲಿ ಮಾದಿಗ ಸಮುದಾಯ ಪ್ರಬಲ ಸಮುದಾಯವಾಗಿದೆ. ಸಾಮಾಜಿಕ ರಾಜಕೀಯ ಹಿಂದುಳಿದ ಜನಾಂಗಕ್ಕೆ ಕೈ ಟಿಕೆಟ್ ನೀಡಿ ವಂಚಿತವಾಗಿರುವ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಜನರ ಅಭಿಪ್ರಾಯವಾಗಿದೆ.
ಹಾಲಿ ಶಾಸಕ ಡಿ.ಎಸ್ ಹೂಲಗೇರಿ ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವರ ಮನೆ ಮುಂದೆ ತಮ್ಮ ಬೋವಿ ಸಮುದಾಯದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಮೂಲಕ ಬಾರಿ ಒತ್ತಡವನ್ನು ಹಾಕಲು ಮುಂದಾಗಿರುವ ಘಟನೆ ಜರುಗಿದೆ ಆದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ.
ಲಿಂಗಸುಗೂರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಹಣವಂತರಿಗೆ ಟಿಕೆಟ್ ಹಂಚಿಕೆ ಮಾಡಿದರೆ ದಲಿತರಿಗೆ ರಾಜಕೀಯ ಅಧಿಕಾರ ಸಿಗುವದಾದರು ಯಾವಾಗ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಎಚ್.ಬಿ ಮುರಾರಿ ಇವರು ಕ್ಷೇತ್ರದಲ್ಲಿ ನಂದಾವಾಡಗಿ ಏತ ನೀರಾವರಿ ಯೋಜನೆ ಜಾರಿಗೆ ತರಲು ಕ್ಷೇತ್ರದ ಸ್ವಾಮಿಗಳ ಮೂಲಕ ಹೋರಾಟ ನಡೆಸಿ ಇಂದಿಗೂ ಜನಪ್ರಿಯ ನಾಯಕ ಎಂಬುದು ಸಾಬೀತಾಗಿದೆ ಮತ್ತು ರಾಹುಲ್ ಗಾಂಧಿ ಪ್ರೇರಣೆಯಿಂದ ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಭಾರತ ಜೋಡೊ ಯಾತ್ರೆ ಮಾಡಿ ತಾಲ್ಲೂಕಿನ ತುಂಬಾ ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ಕಾಂಗ್ರೆಸ್ ಪಕ್ಷದ ಅನೇಕ ಅಜೆಂಡಾವನ್ನು ಜನರಿಗೆ ಮನದಟ್ಟು ಮಾಡುವ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದಾರೆ ರಾಷ್ಟ್ರೀಯ ಭಾರತ ಜೋಡೊ ಯಾತ್ರೆ ನಾಯಕಿ ಮೀನಾಕ್ಷಿ ನಟರಾಜನ್ ಇವರು ರಾಜ್ಯದಲ್ಲಿ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರತ ಜೋಡೊ ಯಾತ್ರೆ ಮೂಲಕ ಬಾರಿ ಸದ್ದು ಮಾಡಿದ ಎಚ್.ಬಿ ಮುರಾರಿ ಇವರಿಗೆ ಟಿಕೆಟ್ ನೀಡಲು ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿ ಅಸ್ಪೃಶ್ಯರಿಗೆ ಟಿಕೆಟ್ ಹಂಚಿಕೆ ಮಾಡಬೇಕು ಎಂಬುದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಸುರ್ಜೆವಾಲ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಿಗೆ ಟಿಕೆಟ್ ನೀಡಲು ಮುಂದಾಗಬೇಕು ಎಂಬುದು ಕ್ಷೇತ್ರದಲ್ಲಿ ಮಾತುಗಳು ಹರಿದಾಡುತ್ತಿದೆ
ಹಾಲಿ ಶಾಸಕ ಡಿ.ಎಸ್ ಹೂಲಗೇರಿ ಇವರು ಬಿಜೆಪಿ ಪಕ್ಷದ ನಾಯಕರನ್ನು ಭೇಟಿ ನೀಡಿದ್ದಾರೆ.
ಎನ್ನಲಾಗಿದೆ ಇದರಿಂದಾಗಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ದಿಕ್ಕು ತೊಚದೆ ಪಂಚಾಯತ್ ಕಟ್ಟೆಗಳಲ್ಲಿ ಗುಪ್ತ ಗುಪ್ತ ಆಗಿ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದಲ್ಲಿ ಭಿನ್ನಮತ ಸ್ಪೋಟವಾಗದಂತೆ ನೋಡಿ ಮೂಲ ಅಸ್ಪುಶ್ಯರಿಗೆ ಎಡಗೈ ಮಾದಿಗ ಸಮುದಾಯ ನಾಯಕ ಎಚ್.ಬಿ ಮುರಾರಿಗೆ ಟಿಕೆಟ್ ಕೊಡಬೇಕು ಎಂದು ಮಾದಿಗ ಸಮಾಜದ ಮುಖಂಡರಾದ ಮಾಹಾದೇವಪ್ಪ ಪರಾಂಪುರ ಹನುಮಂತಪ್ಪ ಜಾಲಿಬೆಂಚಿ ದುರುಗಪ್ಪ ಸೇರಿದಂತೆ ಇನ್ನು ಅನೇಕ ಸಮಾಜದ ಮುಖಂಡರು ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ.
ಮೀಸಲು ಕ್ಷೇತ್ರದಲ್ಲಿ ಎಚ್.ಬಿ ಮುರಾರಿಗೆ ಟಿಕೆಟ್ ನೀಡಲು ಹೆಚ್ಚಿದ ಒತ್ತಡ ಲಿಂಗಸುಗೂರು ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆದರೆ ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡದೆ ಇರುವುದು ಕಾರ್ಯಕರ್ತರಲ್ಲಿ ಮುಖಂಡರಲ್ಲಿ ತಳಮಳ ಶುರುವಾಗಿದೆ ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಮೂರನೇ ಪಟ್ಟಿಯಲ್ಲಿ ಲಿಂಗಸುಗೂರು ಮೀಸಲು ಕ್ಷೇತ್ರಕ್ಕೆ ಮಾದಿಗ ಸಮುದಾಯಕ್ಕೆ ಸೇರಿದ ಎಚ್ ಬಿ ಮುರಾರಿ ಇವರಿಗೆ ಕೈ ಟಿಕೆಟ್ ಘೋಷಣೆ ಮಾಡಬೇಕು ಎಂಬುದು ಮಾದಿಗರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾದಿಗ ಸಮಾಜದ ರಾಜ್ಯ ನಾಯಕ ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ರಾಜ್ಯ ಸಭಾ ಸದಸ್ಯ ಎಲ್ ಹನುಮಂತಯ್ಯ ಇವರಿಗೆ ಕ್ಷೇತ್ರದ ಮಾದಿಗರು ಆಗ್ರಹಿಸಿದ್ದಾರೆ.