ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ

ರಾಯಚೂರು,ಏ.೧೪- ತಾಲೂಕಿನ ತುರುಕುನದೋಣಿ ಗ್ರಾಮದ ಅನೇಕ ಹಿರಿಯ ಮುಖಂಡರು ಹಾಗೂ ಯುವಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಪಕ್ಷ ಸೇರ್ಪಡೆಗೊಂಡ ಪ್ರಮುಖರು ರಾಜು ಮೇಶ್ರಿ, ಅಯ್ಯಪ್ಹ, ಹನುಮಂತ, ಹೆಜೇಕೆಲ್, ಲಾಜರ್, ಮೇಶಾಕ್, ಮೊಜೆಸ್ ಸೂರ್ಯ, ನವೀನ್ ಆನಂದ,ಥಾಮಸ್,ಸುಧಾಕರ್, ಲೋಕರಾಜ್, ರಾಜು ನಾಗಪ್ಪ, ಮಾಲ್ದನ್ ಬಲವಂತ, ರಾಜೇಶ್ ಹನುಮಂತ, ಶಿವಪ್ಪ ಇನ್ನಿತರರು ಸೇರ್ಪಡೆಗೊಂಡರು.