ಕಾಂಗ್ರೆಸ್ ಜಿಲ್ಲೆಯಲ್ಲಿ ಸೋಲು ಸಾಧ್ಯವಿಲ್ಲ

ಕೋಲಾರ,ಮೇ,೩೧:ಕಾಂಗ್ರೆಸ್‌ನ್ನು ಕಾಂಗ್ರೆಸ್ಸಿಗರೆ ಸೋಲಿಸುತ್ತಿದ್ದರೂ ಹೊರತಾಗಿ ಕಾಂಗ್ರೇಸ್ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಸೋಲಿರಲಿಲ್ಲ ಎಂಬುವುದನ್ನು ೨೦೨೩ರ ವಿಧಾನಸಭಾ ಚುನಾವಣೆಯು ಸಾಭೀತು ಪಡೆಸಿದೆ. ಮತದಾನಕ್ಕೆ ಕೇವಲ ೧೫ ದಿನಗಳು ಇರುವಾಗ ಎಲ್ಲರನ್ನು ಸಂಘಟಿಸಿ ಕೊಂಡು ಪ್ರಚಾರ ಮಾಡಿದ ಹಿನ್ನಲೆಯಲ್ಲಿ ೩೩ ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಪ್ರತಿಪಾದಿಸಿದರು,
ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ನೂತನ ಶಾಸಕರಾದ ಕೊತ್ತೂರು ಮಂಜುನಾಥ್ ಅವರಿಗೆ ಅಭಿಮಾನಿಗಳಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು,
ವಿಧಾನ ಪರಿಷತ್ ಸದಸ್ಯರಾದ ನಸ್ಸೀರ್ ಆಹಮದ್, ಶಾಸಕರಾದ ಕೆ.ಶ್ರೀನಿವಾಸಗೌಡ, ರಮೇಶ್ ಕುಮಾರ್, ಕೃಷ್ಣಬೈರೇಗೌಡ ಮುಂತಾದ ಹಿರಿಯರ ಮಾರ್ಗದರ್ಶನದಲ್ಲಿ ಕೊತ್ತೂರು ಮಂಜುನಾಥ್ ಅವರು ಚುನಾವಣಾ ಪ್ರಚಾರವನ್ನು ಕೈಗೊಂಡರು. ಕೇವಲ ೧೫ ದಿನದಲ್ಲಿ ನಾವುಗಳ ಕಳೆದ ೧೫ ವರ್ಷಗಳಿಂದ ಸಾಧಿಸಲಾಗದ ಯಶಸ್ಸುಗಳಿಸಲು ಸಂಘಟನೆ ಮತ್ತು ಕಾರ್ಯಕರ್ತರ ಅಪಾರ ಶ್ರಮವೇ ಕಾರಣ. ನಾವು ಇದೇ ರೀತಿ ಮುಂಬರುವ ಪಂಚಾಯತ್ ಚುನಾವಣೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸ ಬೇಕಾಗಿದೆ ಎಂದು ತಿಳಿಸಿದರು
ವಿಧಾನ ಪರಿಷತ್ ಸದಸ್ಯರಾದ ನಸ್ಸೀರ್ ಆಹಮದ್ ಮಾತನಾಡಿ ಕೇವಲ ೧೪ ದಿನದಲ್ಲಿ ಕ್ಷೇತ್ರದ ೨೪೩ ಗ್ರಾಮಗಳಿಗೆ ಹಾಗೂ ನಗರದ ೩೫ ವಾರ್ಡ್‌ಗಳಿಗೂ ಬೇಟಿ ನೀಡಿ ಮತ ಯಾಚಿಸಿ, ಬಿಜೆಪಿ, ಜೆ.ಡಿ.ಎಸ್. ಪಕ್ಷ ಅಭ್ಯರ್ಥಿಗಳಿಗಿಂತ ೩೨ ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಯಶಸ್ವಿಯಾಗಿದ್ದಾರೆ ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯಾ ಸಮನತೆಗೆ ಒತ್ತು ನೀಡುವ ಮೂಲಕ ಆಡಳಿತ ನೀಡಿ ಕ್ಷೇತ್ರದ ಜನತೆಯ ವಿಶ್ವಾಸವನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ತರುವಂತ ಜವಾಬ್ದಾರಿ ಮತದಾರರು ತಮಗೆ ನೀಡಿದ್ದಾರೆ ಎಂದರು, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಮುಳಬಾಗಿಲಿನ ಮುನಿಅಂಜನಪ್ಪ ಮಾತನಾಡಿದರು.
ವಕ್ಕಲೇರಿ ರಾಜಪ್ಪ ಮಾತನಾಡಿ ಕೊತ್ತೂರು ಮಂಜುನಾಥ್ ಅವರಿಗೆ ಕಾರ್ಯಕರ್ತರು ಹೆಚ್ಚು ಶ್ರಮವಹಿಸಿದ್ದಾರೆ. ಕೆಲವರು ಕೊತ್ತೂರು ಮಂಜುನಾಥ್ ಅವರನ್ನು ನೋಡದೆ ಇದ್ದರೂ ಸಹ ತಾವೇ ಕೊತ್ತೂರು ಮಂಜುನಾಥ್ ಎಂಬಂತೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ, ನಸ್ಸೀರ್ ಆಹಮದ್, ರಮೇಶ್ ಕುಮಾರ್, ಅನಿಲ್ ಕುಮಾರ್, ಸಿ.ಮುನಿಯಪ್ಪ ಅವರ ಮಾರ್ಗದರ್ಶನಗಳು ನಮಗೆ ಪ್ರೇರಣೆಯಾಗಿದ್ದವು ಎಂದು ನುಡಿದರು,
ಇದೇ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೊತ್ತೂರು ಮಂಜುನಾಥ್ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.