ಕಾಂಗ್ರೆಸ್ ಜನಪ್ರತಿನಿಧಿಗಳ ಅಕ್ರಮ ಹಣ ಸಂಗ್ರಹವನ್ನು ಖಂಡಿಸಿ-ಬಿಜೆಪಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಮಂಡ್ಯ ಡಿ11: ಕಾಂಗ್ರೆಸ್ ಜನಪ್ರತಿನಿಧಿಗಳ ಅಕ್ರಮ ಹಣ ಸಂಗ್ರಹವನ್ನು ಖಂಡಿಸಿ ಕೇಂದ್ರ ಸಚಿವ ಕಿಶನ್‍ಪಾಲ್ ಗುರ್ಜರ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ?ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ಕಾರ?ಯಕರ್ತರು, ಭ್ರಷ್ಠಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಜನಪ್ರತಿನಿಧಿಗಳು ಮತ್ತು ಮುಖಂಡರ ವಿರುದ್ದ ಘೋಷಣೆ ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಮಾತನಾಡಿ, ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಮನೆ ಮೇಲೆ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದ್ದು, ಈಗಾಗಲೇ 290 ಕೋಟಿಗೂ ಹೆಚ್ಚಿನ ನಗದು ಪತ್ತೆಯಾಗಿದೆ. 2 ಸಾವಿರ ರೂ. ಮುಖ ಬೆಲೆಯ ನೋಟುಗಳು ಪತ್ತೆಯಾಗಿಲ್ಲ. ಒಂದು ಸಾವಿರ ಕೋಟಿಗೂ ಹೆಚ್ಚಿನ ವೌಲ್ಯದ ನಗದು ಮತ್ತು ಇತರೆ ವಸ್ತುಗಳು ಸಿಗುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.
2000ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಅವುಗಳನ್ನು ಬದಲಾಯಿಸಿಕೊಂಡು ತಮ್ಮ ಖಜಾನೆ ತುಂಬಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ 290 ಕೋಟಿ ರೂ.ಗೂ ಅಧಿಕ ಮೊತ್ತದ ಎಣಿಕೆ ಮುಗಿದಿದ್ದು, ಇನ್ನೂ ಹೆಚ್ಚಾಗಬಹುದು. ಯಾವುದೇ ಸ್ಪಷ್ಟ ಖಾತೆ ದಾಖಲೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಧೀರಜ್ ಸಾಹು ಅವರು ಬೌದ್ ಡಿಸ್ಟಿಲರೀಸ್‍ನ ಸಮೂಹ ಕಂಪನಿ ಒಡೆಯರಾಗಿದ್ದಾರೆ . 2010 ರಿಂದ ಜಾರ್ಖಂಡ್‍ನಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿರುವ ಸಾಹು ಅವರು ಕಾಂಗ್ರೆಸ್‍ನೊಂದಿಗೆ ದೀರ್ಘಕಾಲದ ಒಡನಾಟವನ್ನು ಹೊಂದಿರುವ ಕುಟುಂಬದಿಂದ ಬಂದವರು. ಅವರ ಸಹೋದರ ಶಿವಪ್ರಸಾದ್ ಸಾಹು ಅವರು ಕಾಂಗ್ರೆಸ್ ಟಿಕೆಟ್‍ನಲ್ಲಿ ರಾಂಚಿಯಿಂದ ಎರಡು ಬಾರಿ ಸಂಸದರಾಗಿದ್ದರು ಎಂದು ದೂರಿದರು.
ಉದ್ಯಮಿ ಸಾಹು ಅವರು ತಮ್ಮ 2018 ರ ರಾಜ್ಯಸಭಾ ಚುನಾವಣಾ ಅಫಿಡವಿಟ್‍ನಲ್ಲಿ ಒಟ್ಟು 34.83 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ. ಅವರು 2.04 ಕೋಟಿ ಮೌಲ್ಯದ ಚರ ಆಸ್ತಿಯನ್ನು ತಿಳಿಸಿದ್ದಾರೆ ಮತ್ತು ರೇಂಜ್ ರೋವರ್, ಫಾರ್ಚುನರ್, ಬಿಎಂಡಬ್ಲೂ ಮತ್ತು ಪಜೆರೊ ಸೇರಿದಂತೆ ಐಷಾರಾಮಿ ಕಾರುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ಮೊತ್ತದ ಸಂಗ್ರಹ ಕಾಂಗ್ರೆಸ್ ಪಕ್ಷದ ಲೂಟಿ ನೀತಿಯಲ್ಲೂ ತೋರುತ್ತದೆ ತೆರಿಗೆ ವಂಚನೆ, ಬಾರಿ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದ್ದು, ಇದು ಕಾಂಗ್ರೆಸ್ ಪಕ್ಷದ ತೆರಿಗೆ ವಂಚನೆ, ಭ್ರಷ್ಟಾಚಾರ ಹೆಚ್ಚಾಗಿರುವುದು ಇದರಿಂದ ಗೋಚರವಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ. ಸಿದ್ದರಾಮಯ್ಯ, ಎಸ್.ಪಿ. ಸ್ವಾಮಿ, ಡಾ. ಇಂದ್ರೇಶ್, ಅಶೋಕ್, ವಸಂತ್‍ಕುಮಾರ್, ಪ್ರಸನ್ನಕುಮಾರ್, ನವನೀತ್‍ಗೌಡ, ವಿವೇಕ್, ಪ.ನಾ.ಸುರೇಶ್, ಬಸವರಾಜು, ಕಾಂತರಾಜು, ಸಿ.ಟಿ. ಮಂಜುನಾಥ್, ಹರ್ಷ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.