ಕಾಂಗ್ರೆಸ್ ಜತೆ ಮೈತ್ರಿಯಿಲ್ಲ

ಕೋಲ್ಕತ್ತಾ,ಮಾ.೩- ಮುಂಬರುವ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಥವಾ ಎಡಪಕ್ಷಗಳೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಬದಲಾಗಿ ತೃಣಮೂಲ ಕಾಂಗ್ರೆಸ್ ಜನರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.ಸಾಗರದಿಗಿ ವಿದಾನಸಭೆ ಉಪಚುನಾವಣೆಯಲ್ಲಿ ಎಡಪಕ್ಷ ಬೆಂಬಲಿತ ಕಾಂಗ್ರೆಸ್ ಅಭರ್ಥಿ ಗೆಲುವು ಸಾಧಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ ಅವರು ಈ ವಿಷಯ ತಿಳಿಸಿದ್ದಾರೆ.ಸಾಗರದಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಎಂಸಿ ಸೋಲನ್ನು ಉಲ್ಲೇಖಿಸಿ “ಸತ್ಯ ಇಂದು ಹೊರಬಂದಿದೆ” ಉಪಚುನಾವಣೆ ಫಲಿತಾಂಶ ನಮಗೆಲ್ಲರಿಗೂ ಪಾಠವಾಗಿದೆ, ಕಾಂಗ್ರೆಸ್ ಅಥವಾ ಸಿಪಿಎಂ ಮಾತುಗಳನ್ನು ಕೇಳಬಾರದು, ಬಿಜೆಪಿಯೊಂದಿಗೆ ಇರುವವರ ಜೊತೆ ನಾವು ಹೋಗಲಾರೆವು ಎಂದು ಅವರು ಹೇಳಿದ್ದಾರೆ.ಕಾಂಗ್ರೆಸ್ ಎಡ-ಬಿಜೆಪಿಯ ಒಪ್ಪಂದ “ಅನೈತಿಕ ಮೈತ್ರಿ” ಎಂದು ಕರೆದ ಅವರು ೨೦೨೧ ರಲ್ಲಿ ಸಾಗರ್ದಿಘಿ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಶೇ ೨೨ ಆಗಿತ್ತು ಮತ್ತು ಪಕ್ಷ ತನ್ನ ಮತಗಳ ಶೇ. ೧೩೯ ರಷ್ಡು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರ್ಗಾಯಿಸಿದೆ ಎಂದು ಅವರು ಆರೋಪಿಸಿದ್ದಾರೆ”ಸಿಪಿಎಂ ಮತ್ತು ಕಾಂಗ್ರೆಸ್ ಒಟ್ಟಿಗೆ ಇದ್ದವು ಮತ್ತು ಈಗ ಬಿಜೆಪಿ ಮತವೂ ಕಾಂಗ್ರೆಸ್‌ಗೆ ವರ್ಗಾವಣೆಯಾಗಿದೆ. ಅನೈತಿಕ ಮೈತ್ರಿ ಇದ್ದರೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಹೇಗೆ ಹೋರಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.ಬಿಜೆಪಿ ವಿರುದ್ಧ ಎಡರಂಗ ಹೇಗೆ ಹೋರಾಡುತ್ತದೆ ಬಿಜೆಪಿ ವಿರೋಧಿ ಎಂದು ಹೇಗೆ ಹೇಳಲು ಸಾದ್ಯ ಎಂದ ಅವರು ಬಿಜೆಪಿಯ ಸಹಾಯದಿಂದ ಬ್ಯಾನರ್ಜಿಯನ್ನು ಸೋಲಿಸಲು ಬಯಸುತ್ತಿದ್ದಾರೆ ಎಲ್ಲಾ ಮೂರು ಪಕ್ಷಗಳು ಕೋಮು ಸಂಘರ್ಷದ ಕಾರ್ಡ್ ಆಡುತ್ತಿವೆ ಎಂದು ಆರೋಪಿಸಿದ್ದಾರೆ.