
ಕೋಲಾರ,ಮೇ,೧೫- ಕರ್ನಾಟಕದ ಮೊದಲ ಸಚಿವ ಸಂಪುಟದಲ್ಲಿ ೫ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೇಸ್ ಪಕ್ಷಕ್ಕೆ ರಾಹುಲ್ ಗಾಂಧಿಯವರು ಸೂಚಿಸಿದ್ದಾರೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಾನಿ, ಅಂಬಾನಿ, ಲಲಿತ್ ಮೋದಿ, ನೀರವ್ ಮೋದಿ ಮುಂತಾದ ಬಂಡಾವಳಷಾಹಿಗಳ ಪಕ್ಷವನ್ನು ಸೋಲಿಸಿದ ಕೀರ್ತಿ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಸಂದಿದೆ. ಬಡವರ ಪರ ಕಾಂಗ್ರೆಸ್ ಪಕ್ಷವು ಹಲವಾರು ಹೋರಾಟಗಳನ್ನು ಮಾಡಿದ್ದಲ್ಲದೆ, ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು ೩೫೦೦ ಕಿ.ಮಿ ಜೋಡೋಯಾತ್ರೆ ಮಾಡಿ ಜನರ ಸಮಸ್ಯೆಗಳನ್ನು ಅರಿತು ಈ ಗ್ಯಾರೆಂಟಿ ಯೋಜನೆಯ ಆಶ್ವಾಸನೆ ನೀಡಲು ಸೂಚಿಸಿದ್ದು ಈಗಾ ಸಚಿವ ಸಂಪುಟದಲ್ಲಿ ಜಾರಿ ಮಾಡಲು ಅದೇಶಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆವ ಪಕ್ಷವಾಗಿದೆ. ಈ ಹಿಂದೆ ಸುಮಾರು ೬೫ ಆಶ್ವಾಸನೆಗಳ ಪೈಕಿ ೫೮ ಭರವಸೆಗಳನ್ನು ಈಡೇರಿಸಿದಂತ ವಿಶ್ವಾಸಾರ್ಹವಾಗಿರುವ ಪಕ್ಷವಾಗಿರುವುದರಿಂದ ಮತದಾರರ ಪ್ರಭುಗಳು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದು ಆಡಳಿತ ಚುಕ್ಕಾಣಿ ನೀಡಿದೆ.ಮತದಾರರ ವಿಶ್ವಾಸವನ್ನು ಪಕ್ಷವು ಎಂದಿಗೂ ಕಳೆದು ಕೊಳ್ಳಲು ಇಚ್ಚಿಸುವುದಿಲ್ಲ. ಕಾಂಗ್ರೇಸ್ ಪಕ್ಷವು ಕೊಟ್ಟ ಮಾತಿನಂತೆ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು,
ಜಿಲ್ಲೆಯಲ್ಲಿ ಸಚಿವ ಸಂಪುಟಕ್ಕೆ ಯಾವ ಶಾಸಕರು ಸೇರ್ಪಡೆಯಾಗುತ್ತಾರೆ ಎಂಬ ಪ್ರಶ್ನೆಗೆ ಅದೆಲ್ಲಾವು ಹೈ ಕಮಾಂಡ್‌ಕ್ಕೆ ಸಂಬಂದಿಸಿದ ವಿಷಯವಾಗಿದೆ ನಾವು ಅದರಲ್ಲಿ ಮೂಗು ತೋರಿಸುವುದು ಸಮಂಜಸವಲ್ಲ. ಪಕ್ಷದ ಹೈ ಕಮಾಂಡ್ ಸೂಚಿಸುವುದನ್ನು ಪಾಲಿಸುವುದಷ್ಟೆ ನಮ್ಮ ಕೆಲಸವಾಗಿದೆ ಎಂದು ಸ್ವಷ್ಟ ಪಡೆಸಿದರು,
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಕೊತ್ತೂರು ವೆಂಕಟರಮಣ, ಆನಂತಪ್ಪ(ಚಿನ್ನಿ), ನಗರಸಭಾ ಮಾಜಿ ಅಧ್ಯಕ್ಷ ವಿ.ಪ್ರಕಾಶ್,ಮಾಜಿ ಸದಸ್ಯ ಮೋಹನ್ ಬಾಬು, ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ವೈ ಶಿವಕುಮಾರ್ ಮುಂತಾದವರು ಹಾಜರಿದ್ದರು,