ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ

ಸಿರವಾರ,ಮಾ.೧೯- ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ನು ನೀಡಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ದೇಶದ, ರಾಜ್ಯದ ಅಭಿವೃದ್ಧಿಗೆ ಬುನಾದಿ ಹಾಕಿದೆ, ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಆಶ್ರಯ ಮನೆಗಳಿಗೆ ಅನುದಾನ ನೀಡಿಲ್ಲ ಇಂತಹ ವಿಷಯಗಳನ್ನು ಮತದಾರರಿಗೆ ಮನದಟ್ಟು ಮಾಡಿ, ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಲು ಮನವಿಮಾಡಿ, ಕಾರ್ಯಕರ್ತರು ಹಗಲು ರಾತ್ರಿ ಕೆಲಸಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರಬೇಕು.
ನುಡಿದಂತೆ ನಡೆದ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ, ಪ್ರತಿ ವ್ಯಕ್ತಿಗೆ ೧೦ ಕೆಜಿ ಅಕಿಯನ್ನು ಉಚಿತವಾಗಿ ನೀಡುತ್ತೆವೆ. ಪ್ರತಿ ಕುಟುಂಬದ ಯಜಮಾನಿಗೆ ರೂ. ೨೦೦೦ ನೇರವಾಗಿ ಅಕೌಂಟ್ ಗೆ ಹಾಕುತ್ತಾರೆ ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ಫ್ರೀಯಾಗಿ ಕೊಡುತ್ತಾರೆ ಯೋಜನೆಗಳ ಬಗ್ಗೆ ಗ್ಯಾರಂಟಿ ಕಾರ್ಡನ್ನು ನೀಡುತ್ತಿದ್ದೇವೆ. ಪ್ರಣಾಳಿಕೆಯ ಗ್ಯಾರೆಂಟಿ ಕಾರ್ಡ ನ ಮೇಲೆ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಿ ಇದೆ. ಸರ್ಕಾರ ಬರುವುದು ಖಚಿತ, ಯೋಜನೆ ಜಾರಿಗೆ ತರುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ನಾಗಣ್ಣ ಸಾಹುಕಾರ, ಗುರುವನ್ನು ಸಾಹುಕಾರ, ಯಮನಪ್ಪ ಯಾದವ್, ಗ್ರಾ.ಪಂ ಸದಸ್ಯ ತಿಪ್ಪಣ್ಣ ವಕೀಲರು, ಶಿವುಕುಮಾರ ಪೋಲಿಸ್ ಪಾಟೀಲ್, ಯಂಕಪ್ಪ ಮಾಸ್ತರ, ಶ್ರೀನಿವಾಸ, ಅಂಜಿನಪ್ಪ ,ಹುಸೇನಪ್ಪ, ಬಸವರಾಜ, ಗಂಗಾಧರ, ಜಗದೀಶ್, ಶಿವರಾಜ್ ,ಪೂಜಾರಿ, ರವಿಕುಮಾರ್ ಪೂಜಾರಿ ನಿಂಗಪ್ಪ, ದುರುಗಪ್ಪ, ರವಿ ಇನ್ನಿತರರು ಇದ್ದರು.