(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.29: ಚುನಾವಣೆ ಮುನ್ನ ನೀಡಿದ ಗ್ಯಾರೆಂಟಿಗಳನ್ನು ಷರತ್ತು ರಹಿತವಾಗಿ ಜಾರಿಗೆ ತಂದರೆ ಸ್ವಾಗತ, ಷರತ್ತು ಹಾಕಿದರೆ
ಪ್ರತಿ ತಾಲೂಕಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಸಿ ಶಿವಕುಮಾರ್ ವಿರುದ್ದ ವಂಚನೆ ಕೇಸು ದಾಖಲೆ ಮಾಡಲಿದೆ ಎಂದು ಇಲ್ಲಿನ ವಕೀಲ ಚಂದ್ರಶೇಖರ ರೆಡ್ಡಿ ಹೇಳಿದ್ದಾರೆ.
ಅವರಿಂದು ಸಂಜೆವಾಣಿಯೊಂದಿಗೆ ಮಾತನಾಡಿ. ಜೂನ್ ಒಂದರಿಂದ ಕೇಸು ದಾಖಲು ಸಿದ್ದತೆ ಮಾಡಿಕೊಳ್ಳುವೆ. ಕೇಸು ದಾಖಲಿಸಲು ಬಯಸುವ ಜನತೆ ನನಗೆ ತಮ್ಮ ಆಧಾರ್ ಮತ್ತು ಓಟರ್ ಕಾರ್ಡು ನೀಡಿದರೆ ಸಾಕು ಅವರ ಪರವಾಗಿ ವಕಾಲತ್ತು ಮಾಡುವೆ. ಕೋರ್ಟ್ ಫೀ 100 ರೂ ನೀಡಿದರೆ ಸಾಕು. ಪ್ರತಿಯೊಬ್ಬರದೂ ಪ್ರತ್ಯೇಕ ಕೇಸು ದಾಖಲು ಮಾಡುವೆ. ಸಂಪರ್ಕಕ್ಕೆ 9449463444.
ಉಚಿತ ಎಂಬುದನ್ನು ವಿಕಲಚೇತನರು, ನಿಶಕ್ತರು ಅಂತಹವರಿಗೆ ಉಚಿತ ಕೊಡಬೇಕು, ಸಶಕ್ತರಿಗೆ ಉಚಿತ ನೀಡುವುದು ತಪ್ಪು ಎಂದು ಸಹ ಹೇಳುತ್ತಾರೆ.