ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.24:- ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿದ್ದು, ಈ ಯೋಜನೆಗಳು ಜನರ ಕಲ್ಯಾಣಕ್ಕೆ ಹೆಚ್ಚಿನ ಉಪಯುಕ್ತವಾಗಲಿದೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷÀತ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಛತ್ರಪತಿ ಶಾಹುಮಹಾರಾಜರ ಜನ್ಮ ದಿನದ ಅಂಗವಾಗಿ ಭಾರತೀಯ ವಿದ್ಯಾರ್ಥಿ ಸಂಘ(ಬಿವಿಎಸ್) ವತಿಯಿಂದ ಚಾನಗರ ತಾಲೂಕಿನ 2022-23 ನೇ ಸಾಲಿನ ಎಸ್‍ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಅಭಿವೃದ್ದಿಗೆ ಪೂರಕವಾಗಿರುವ ಐದು ಗ್ಯಾರಂಟಿಗಳು ಸಮರ್ಪಕವಾಗಿ ಅನುಷ್ಠಾನವಾಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ಈ ಯೋಜನೆಗಳ ಫಲವನ್ನು ಪಡೆದುಕೊಂಡು ಅಭಿವೃದ್ದಿಯತ್ತ ಸಾಗಬೇಕು. ಅದು ಬಿಟ್ಟು ಸರ್ಕಾರ ಗ್ಯಾರಂಟಿ ಜಾರಿ ಮಾಡಿದೆ ಎಂದು ಯಾರು ಸೋಮಾರಿಗಳಾಗರಬಾರದು. ಸಿದ್ದರಾಮಯ್ಯ ಅವರು ದೂರದೃಷ್ಟಿತ್ವ ಹಾಗೂ ಬಡವರು ಹಾಗೂ ಮಧ್ಯಮ ವರ್ಗಗಳಿಗೆ ಸುಲಭವಾಗಿ ತಲುಪುವಂತಹ ಯೋಜನೆಗಳು ಇದಾಗಿದೆ ಎಂದರು.
12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರ ಕ್ರಾಂತಿಕಾರಿ ನಡೆಯ ನಂತರ ಮೊಟ್ಟಮೊದಲ ಬಾರಿಗೆ ಛತ್ರಪತಿಶಾಹುಮಹಾರಾಜರು ಮೀಸಲಾತಿ ಜಾರಿಗೆ ತಂದರು. ಈ ಭಾಗದಲ್ಲಿ ಮೈಸೂರು ಮಹಾರಾಜರ ಒಡೆಯರ ಕುಟುಂಬಸ್ಥರು ಸಹ ಮೀಸಲಾತಿ ಜಾರಿಗೆ ತಂದಿತು. ತದನಂತರ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ಸಂವಿಧಾನ ಬದ್ದವಾಗಿ ಇಡೀ ದೇಶಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಇವರನ್ನು ಸದಾ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠಪ್ರವಚನಗಳ ಜೊತೆಗೆ ಶಾಲೆ ನಂತರ ಮನೆ ಬಂದ ಮಕ್ಕಳಿಗೆ ಅರ್ಧ ತಾಸು ಪೆÇೀಷಕರು ಮನೆಯಲ್ಲಿ ಪಾಠ ಮಾಡಿದರೆ ಮಕ್ಕಳ ಕಲಿಕಾ ಮಟ್ಟ ಅಭಿವೃದ್ದಿಯಾಗುತ್ತದೆ. ಶಿಕ್ಷಕರು ಹೇಳಿಕೊಡುವ ಪಾಠದಿಂದಲ್ಲೇ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ ಪಠ್ಯಪುಸ್ತಕಗಳು ಓದು ಅಂಕ ಪಡೆಯಲು ಮಾತ್ರ ಸೀಮಿತವಾಗಿದೆ ಶಾಲಾ ಶಿಕ್ಷಣದಿಂದಲ್ಲೇ ಪ್ರಗತಿ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಂಕೋಚ ಬಿಟ್ಟು ಶಿಕ್ಷಕರ ನೋಡಿ ಕಲಿಯಬೆಕು. ಆಗ ಮಾನವೀಯತೆ, ಸಂಸ್ಕಾರ ಬರುತ್ತದೆ. ಪ್ರತಿ ವಿದ್ಯಾರ್ಥಿಯಲ್ಲೂ ಸಾಮಾಥ್ರ್ಯವಿದೆ. ಆತ್ಮಸ್ಥೈರ್ಯ ವಿಟ್ಟುಕೊಂಡು ಶಿಕ್ಷಣ ಕಲಿತರೆ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎಂದರು.
ದೇವಾಲಯ ಹೋಗಿ ಪೂಜಿಸಲು ಬದಲು ಗ್ರಂಥಾಲಯಕ್ಕೆ ಹೋಗಿ ಓದಿದ್ದರೆ ಪ್ರಯೋಜನವಾಗುತ್ತದೆ. ಸಂವಿಧಾನ ಉಳಿದರ ನಾವೆಲ್ಲರೂ ಉಳಿಯಲು ಸಾಧ್ಯ ಇದನ್ನು ಚಿಂತನೆ ಮಾಡಬೇಕು ಎಂದರು.
ಬೆಂಗಳೂರು ಅಕ್ಕ ಐಎಎಸ್ ಆಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಇಂಗ್ಲಿಷï ಅವರಿಸಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಇಂಗ್ಲಿಷï, ಕಂಪ್ಯೂಟರ್ ಶಿಕ್ಷಣ ಹೊಂದಬೇಕು. ಸಾಂಪ್ರದಾಯಕ ತರಗತಿಗಳ ಜೊತೆ ಹೊಸಹೊಸ ತರಗತಿಗಳ ಓದಬೇಕು ಎಂದರು.
ಐಎಎಸ್, ಕೆಎಎಸ್ ಮಾಡುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು ಆಗಾಗಿ ಪ್ರತಿ ದಿನ 6 ಗಂಟೆಗಳ ಓದಬೇಕು. ಹಿಂದೆ ಶಾಲೆಗೆ ಹೋಗದಿದ್ದರೆ. ಚೆನ್ನಾಗಿ ಓದದಿದ್ದರೆ ಎಮ್ಮೆ ಮೇಯಿಸಕ್ಕೆ ಹೋಗು ಎನ್ನುತ್ತಿರುವುದು. ಆದರೆ ಜಾಗತಿಕರಣದಲ್ಲಿ ದನ, ಎಮ್ಮೆ ಮೇಯಿಸುವುದು ದೊಡ್ಡ ದೊಡ್ಡ ಉದ್ಯಮವಾಗಿ ಪರಿವರ್ತನೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್ ಮಾತನಾಡಿ, ನಮ್ಮ ಸಂಘವು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಯನ್ನು ಹೊಂದಿ ಕೆಲಸ ಮಾಡುತ್ತಿದೆ. ಕಳೆದ 12 ವ?ರ್Àಗಳಿಂದಲ್ಲೂ ಎಸ್ ಎಸ್ ಎಲ್ ಸಿ, ಪಿಯುಸಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು ಪೆÇ್ರೀತ್ಸಾಹಿಸಿಕೊಂಡು ಬರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಡಾ.ಎ.ಆರ್.ಬಾಬು, ಪ್ರಾಂಶುಪಾಲ.ಪ್ರಭಕರ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಹೇಶ್ ಕುದರ್, ಎಪಿಸಿಸಿ ಅಧ್ಯಕ್ಷ ಮನೋಜ್ ಪಟೇಲ್, ಯುವ ವಿಜ್ಞಾನಿ ಡಾ.ನವೀನ್ ಮೌರ್ಯ, ಡಾ.ಎನ್.ಎಸ್.ಮೋಹನ್, ನಗರಸಭಾ ಮಾಜಿ ಸದಸ್ಯವಸಿ.ಕೆ.ಮಂಜುನಾಥ್ ಸಂಘದ ಜಿಲ್ಲಾ ಪ್ರಧಾನ ರಂಗಸ್ವಾಮಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ಚಂದ್ರಮೋಹನ್, ರಾಹುಲ್ ರಾಜೇಶ್ ವಿದ್ಯಾರ್ಥಿಗಳು ಹಾಜರಿದ್ದರು.