ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

ರಾಯಚೂರು,ಮಾ.೨೪- ನಗರದ ಡಾ. ಬಿ.ಆರ್ ಅಂಬೇಡ್ಕರ್ ನಗರ ನವಾಬ್ ಗಡ್ಡ ವಾರ್ಡ್ ನಂಬರ್ ೧೯.ರಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ವತಿಯಿಂದ, ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದವರು ಬಡವರ ಸಲುವಾಗಿ ನಮ್ಮ ಸರಕಾರ ಬಂದರೆ, ಪ್ರಾಮಾಣಿಕ ಕಾರ್ಡ್‌ಗಳನ್ನು ಪ್ರತಿ ಮನೆ ಗೃಹಲಕ್ಷ್ಮಿ ಮಹಿಳೆಯರಿಗೆ ಒಬ್ಬರಿಗೆ ಮನೆಗೆ ೨೦೦೦.ರೂಪಾಯಿ ಅವರ ಖಾತೆಗೆ ಜಮಾ ಆಗುವುದು ಮತ್ತು ಗೃಹ ಜ್ಯೋತಿ ೨೦೦ ವಿದ್ಯುತ್ ಉಚಿತ ಮತ್ತು ಪ್ರತಿಯೊಂದು ಬಿ.ಪಿ.ಎಲ್ ಕಾರ್ಡ್ ದಾರಾರಿಗೆ ತಲಾ ಒಬ್ಬರಿಗೆ ೧೦.ಕೆಜಿ ಅಕ್ಕಿ ಕೊಡುತ್ತೇವೆ ಪ್ರತಿ ಮನೆಮನೆಗೂ ಕಾರ್ಡ್‌ನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಎ. ಉರುಕುಂದಪ್ಪ ಆಲೂರ್ ಜಿಲ್ಲಾ ಅಧ್ಯಕ್ಷರು ಮತ್ತು ನಗರ ಘಟಕದ ಅಧ್ಯಕ್ಷರಾದ ಪಿ. ನರಸಿಂಹಲು ಮುಂತಾದ ವಾರ್ಡ್‌ನ ಕಾರ್ಯಕರ್ತರು ಭಾಗವಹಿಸಿದ್ದರು.