
ಜೇವರ್ಗಿ:ಮೇ.1:ಗೃಹಲಕ್ಷ್ಮೀ, ಯುವನಿಧಿ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ, ಮಹಿಳೆಯರಿಗೆ ಸಾರಿಗೆ ಬಸ್ಸುಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣದಂತಹ ಕಾಂಗ್ರೆಸ್ ಪಕ್ಷ ಕರ್ನಾಟಕ ಅಸಂಬ್ಲಿ ಚುನಾವಣೆಯಲ್ಲಿ ನೀಡಿರುವ ಜನಮೆಚ್ಚಿರುವ ಭರವಸೆಗಳು ಅನುಷ್ಠಾನಗೊಂಡಲ್ಲಿ ಬಡವರ ಬಾಳು ಬೆಳಗೋದು ನಿಶ್ಚಿತ ಎಂದು ಜೇವರ್ಗಿ ಕಾಂಗ್ರೆಸ್ ಉಮೇದುವಾರರಾದ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಜೇವರ್ಗಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಚುನಾವಣಾ ಪ್ರಚಾರ ನಿಮಿತ್ಯವಾಗಿ ಜೇವರ್ಗಿ ಮತಕ್ಷೇತ್ರದ ಕರ್ಕಿಹಳ್ಳಿ, ಅರಳಗುಂಡಗಿ ಹರನಾಳ್ (ಬಿ), ಮಾಗಣಗೇರಾ, ಕಡಕೋಳ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಪಾದಯಾತ್ರೆ, ರೋಡ್ ಷೋ ನಡೆಸುವ ಮೂಲಕ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಕೂಡಿಕೊಂಡು ಡಾ. ಅಜಯ್ ಧರ್ಮಸಿಂಗ್ ಮತಯಾಚನೆ ಮಾಡಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರೋದಿಲ್ಲವೆಂಬ ಸಿಎಂ ಬೊಮ್ಮಾಯಿ ಹಳಿಕೆಗೆ ಕಿರುಗೇಟು ನೀಡಿರುವ ಡಾ. ಅಜಯ್ ಸಿಂಗ್ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿರೋದು ಕಂಡು ಬಿಜೆಪಿಗರು ಗಾಬರಿಯಾಗಿದ್ದಾರೆ. ಹೀಗಾಗಿ ಏನೇನೋ ಮಾತನ್ನಾಡುತ್ತಿದ್ದಾರೆ. ಕಾಂಗ್ರೆ???ಗೆ ಜನ ಮತ ಹಾಕೋದು ಗ್ಯಾರಂಟಿ, ನಮ್ಮ ಬಹುಮತದ ಸರ್ಕಾರ ಆಗೋದು ಗ್ಯಾರಂಟಿ, ನಂತರ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೆಲ್ಲವೂ ಜಾರಿಯಾಗೋದು ನಿಶ್ಚಿತ, ಬಿಜೆಪಿಯೇ ಮಂದಿನ ದಿನಗಳಲ್ಲಿ ಗಳಗಂಟಿಯಾಗುತ್ತದೆ ಎಂದು ಮಾತಿನಲ್ಲೇ ಬಿಜೆಪಿಗೆ ಛೇಡಿಸಿದರು.
ತಮ್ಮ ತಂದೆಯವರಾದ ಧರಂಸಿಂಗ್ ಅವರನ್ನು ಸತತ ಹರಸುವ ಮೂಲಕ ಜೇವರ್ಗಿ ಜನ ಅವರನ್ನು ನಾಡಿನ ಅತ್ಯುನ್ನತ ಸ್ಥಾನವಾದ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಂತೆ ಶಕ್ತಿ ತುಂಬಿದ್ದೀರಿ. ನನಗೂ 2 ಬಾರಿ ಗೆಲ್ಲಿಸಿ ತಾಲೂಕಿನ ಪ್ರಗತಿಗೆ ಒತ್ತಾಸೆಯಾಗಿ ನಿಲ್ಲುವಂತೆ ಮಾಡಿದ್ದೀರಿ, ತಾಲೂಕಿನ ಪ್ರಗತಿಗೆ ಇನ್ನೂ ಹೆಚ್ಚಿನ ಕೆಲಸ ಮಾಬೇಕಿದೆ. ಅದಕ್ಕಾಗಿ 2023 ರ ಅಸಂಬ್ಲಿ ಚನಾವಣೆಯಲ್ಲಿ ತಮ್ಮನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಪ್ರಗತಿಗೆ ಹೆಚ್ಚಿನ ಶಕ್ತಿ ತುಂಬುವಂತೆ ಡಾ. ಅಜಯ್ ಸಿಂಗ್ ತಮ್ಮ ಪಾದಾತ್ರೆ ಕಾಲದಲ್ಲಿ ಜನರಿಗೆ ಡಾ. ಅಜಯ್ ಸಿಂಗ್ ಕೋರಿದರು.
ಪಾದಾತ್ರೆಯುದ್ದಕ್ಕೂ ಸಾಮಾನ್ಯ ಜನ, ಮಹಿಳೆಯರು, ವಯೋವೃದ್ಧರು ತುಂಬಾ ಪರೀತಿಯಿಂದ ಡಾ. ಅಜಯ್ ಸಿಂಗ್ ಅವರನ್ನು ತಮ್ಮ ಮನೆಗೆ, ಊರಿಗೆ ಬರಮಾಡಿಕೊಂಡು ಮತ ಹಾಕಿ ಹೆಚ್ಚಿನ ಅಂತರಿಂದ ಗೆಲ್ಲಿಸುವ ವಾಗ್ದಾನ ಮಾಡಿದರು. ಜೇವರ್ಗಿ ಪ್ರಗತಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ತುರುವದರ ಜೊತೆಗೇ ಧರಂಸಿಂಗ್ ಪ್ರತಿಷ್ಠಾನದಿಂದಲೂ ಸಾಕಷ್ಟು ವೆಚ್ಚ ಮಾಡಿ ಜೇವರ್ಗಿಯಲ್ಲಿ ಕೈಗೊಳುತ್ತಿರುವ ಜನಕಲ್ಯಾಣ ಕೆಲಸಗಳು ಸಾಕಷ್ಟು ಜನರಿಗೆ ಉಪಯುಕ್ತವಾಗಿವೆ. ಇವೆಲ್ಲವೂ ನಿರಂತರ ನಡೆಯಬೇಕಾದಲ್ಲಿ ನೀವು ಮತ್ತೊಮ್ಮೆ ಗೆದ್ದು ಬರಬೇಕು, ಜೇವರ್ಗಿ ಜನ ನಿಮ್ಮ ಕೆಲಸಗಳಿಗೂ ಸಂತುಷ್ಟರಾಗಿz??É?ವೆಂದು ಅನೇಕರು ಡಾ. ಅಜಯ್ ಸಿಂಗ್ ಅವರೊಂದಿಗೆ ನೇರ ಮಾತುಕತೆಯಲ್ಲಿ ಕೃತಜ್ಞತೆ ಭಾವ ಹೊರಹಾಕಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕ್ಕುಂ ಪಟೇಲ್, ಮುಖಂಡರಾದ ಎಸ್ ಎಸ್ ಹುಲ್ಲೂರ್, ಚಂದ್ರಶೇಖರ್ ಹರನಾಳ ಕಾಶಿರಾಯ ಗೌಡ ಯಲಗೊಡ್, ರೇವಣಸಿದ್ಧ ಕಮಾನಮನಿ, ಶರಣಗೌಡ ಹಿರೇಗೌಡ, ಶಿವು ಪಾಟೀಲ್, ಬಸವರಾಜ್ ಜ್ಯೋತಪ್ಪ ಗೌಡ, ಗೋಳಲಪ್ಪ ಗೌಡ ಮಾಗಣಗೇರಾ, ಚಂದ್ರಕಾಂತ್ ಮಗಣಗೇರಾ ಚಂದ್ರಶೇಖರ ಪುರಾಣಿಕ್, ವಸಂತ್ ನರಿಬೋಳ ಶೌಕತ್ ಅಲಿ ಆಲೂರ್, ಶಾಂತಪ್ಪ ಕೂಡಲಗಿ ಅಯ್ಯನಗೌಡ ಪುರದಳ್ಳಿ , ಅಯ್ಯನಗೌಡ ವಡಗೇರಾ, ವಿಜಯ್ ಕುಮಾರ ಹಿರೇಮಠ್, ಅಪ್ಪು ಕುಲಕರ್ಣಿ, ರವಿ ಕೊಳಕೂರ್, ಭೀಮರಾಯ್ ಪಾಟೀಲ್ ಬಳಬಟ್ಟಿ, ಶಿವನಗೌಡ ವಡಗೇರಾ, ದೇವಾನಂದ್ ಪೂಜರಿ, ಶರಣಪ್ಪ ದೊಡಮನಿ, ಹಾಯ್ಯಲಪ್ಪ ಪೂಜಾರಿ, ಶಿವಶರನಪ್ಪ ಅನಜಗಿ, ನಾಗಪ್ಪ ದೊಡಮನಿ, ಸಕ್ರೆಪ್ಪ ಕಟ್ಟಿಮನಿ, ದೇವಪ್ಪ ನಾಟಿಕಾರ್, ಪ್ರೇಮಗೌಡ ಬಿರಾದಾರ್, ಭೀಮರಾಯ ಗೌಡ ಬಿರಾದರ್, ದೊಡ್ಡಪ್ಪ ಚಪ್ಪರಮನಿ, ಶಾಂತಪ್ಪ ಮೇಟಿ, ಪ್ರಕಾಶ್ ಬಡಿಗೇರ್, ದೊಡಪ್ಪ ಹಿರೇಮಠ್ ಕೂರಬರ, ಚಾ???ಸಾಬ್ ನದಾಪ್, ಮೆಹಬೂಬ್ ಪಟೇಲ್ ಕಚ್ಚುರ್ ಮಲ್ಲು ಬಿರಾದಾರ್ ಸೇರಿದಂತೆ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.