ಕಾಂಗ್ರೆಸ್ ಗೆ ಮತ ನೀಡುವಂತೆ ಪ್ರತಾಪರೆಡ್ಡಿ ದಂಪತಿಗಳಿಂದ ಮನೆ ಮನೆ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 05 : ಕಾಂಗ್ರೆಸ್ ಪಕ್ಷದಿಂ ನಗರ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿರುವ ತಮ್ಮ ಸಹೋದರನ ಪುತ್ರ ಭರತ್ ರೆಡ್ಡಿಗೆ ಮತ ನೀಡುವಂತೆ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ, ಪತ್ನಿ ಶೈಲಜಾ ಪ್ರತಾಪ ರೆಡ್ಡಿ ಅವರು ತಮ್ಮ ಬೆಂಲಿಗರೊಂದಿಗೆ ಇಲ್ಲಿನ ಬಸವೇಶ್ವರ ನಗರದಲ್ಲಿ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬಳ್ಳಾರಿಯಲ್ಲಿ ಏನೇ ಸರ್ಕಾರಿ ಕೆಲಸಗಳು ಆಗಬೇಕೆಂದರೆ ಲಂಚವಿಲ್ಲದೆ ಆಗುವುದಿಲ್ಲ. ಲಂಚ ಮುಕ್ತ ಬಳ್ಳಾರಿಗಾಗಿ ಸಂಕಲ್ಪ ಮಾಡಿರುವ ಭರತ್ ರೆಡ್ಡಿ ಅವರನ್ನು ಗೆಲ್ಲಿಸಿ. ಜನ ಸಾಮಾನ್ಯರು, ಮಧ್ಯಮ ವರ್ಗದವರ ಜೀವನಕ್ಕೆ ಸಹಕಾರಿಯಾಗಲು ಕಾಂಗ್ರೆಸ್ ಪ್ರಣಾಳಿಕೆ ರೂಪಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಉತ್ತಮ ಆಡಳಿತ ನೀಡಲಿದೆಂಬ ಭರವಶೆಯನ್ನು ನೀಡಿದರು.
ವೀರಶೈವ ಲಿಂಗಾಯತ ಪರ ಎಂದು ಹೇಳುತ್ತಿದ್ದ ಬಿಜೆಪಿ ಇಂದು ಈ ಸಮುದಾಯವನ್ನು ಅಧಿಕಾರದಿಂದ ದೂರ ಮಾಡಲು ರಾಜ್ಯದ ಲಿಂಗಾಯತ ಸಮುದಾಯದ ಉನ್ನತ  ನಾಯಕರ‌ನ್ನು ದೂರ ಇಡುವ ಹುನ್ನಾರ ನಡೆಸಿರುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಉತ್ಸಾಹಿ ಭರತ್ ಗೆ ಮತ ನೀಡಿ ಸದಾ ನಿಮ್ಮಜೊತೆಗೆ ಇಲ್ಲಿನ ನಾಗರೀಕ ಸೌಲಭ್ಯಗಳಿಗಾಗಿ ಶ್ರಮಿಸುತ್ತಾರೆಂದು.
ಇವರ ಮನವಿಗೆ ಸ್ಥಳೀಯ ಮತದಾರರು ಬದಲಾವಣೆಯ ಭರವಶೆಯ ಮಾತು ನೀಡಿದರು.
ಪ್ರಚಾರದಲ್ಲಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು