ಕಾಂಗ್ರೆಸ್ ಗೆ ಜೈಭೀಮ್ ಬೆಂಬಲ

ಆನೇಕಲ್. ಮೇ. ೦೭- ಮೇ ೧೦ ರಂದು ವಿಧಾನ ಸಭೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಶಿವಣ್ಣ ರವರಿಗೆ ಬೆಂಬಲ ಘೋಷಣೆ ಮಾಡಿದ ಗಡಿನಾಡು ಜೈಭೀಮ್ ವೇದಿಕೆಯ ರಾಜ್ಯಾಧ್ಯಕ್ಷ ಕ್ರಾಂತಿ ಮುನಿರಾಜು ಮತ್ತು ಅವರ ತಂಡ.
ಇನ್ನು ಕಾರ್ಯಕ್ರಮದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಗಡಿನಾಡು ಜೈಭೀಮ್ ವೇದಿಕೆಯ ಪದಾಧಿಕಾರಿಗಳು ಶಾಸಕ ಬಿ.ಶಿವಣ್ಣ ರವರಿಗೆ ಬೆಂಬಲ ಘೋಷಣೆ ಮಾಡಿದ ದೃಶ್ಯ ಕಂಡು ಬಂತು.
ಈ ವೇಳೆ ಗಡಿನಾಡು ಜೈಬೀಮ್ ವೇದಿಕೆಯ ರಾಜ್ಯಾಧ್ಯಕ್ಷ ಕ್ರಾಂತಿ ಮುನಿರಾಜು ಮಾತನಾಡಿ ದೇಶದಲ್ಲಿ ಸಂವಿಧಾನ ಉಳಿಯಬೇಕಾದರೆ ಜೊತೆಗೆ ಸಮಾಜದಲ್ಲಿ ಶಾಂತಿ ನೆಲಸಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ಗಡಿನಾಡು ಜೈಬೀಮ್ ವೇದಿಕೆಯು ರಾಜ್ಯಾದಂತ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದು ವಿಶೇಷವಾಗಿ ಆನೇಕಲ್ ಕ್ಷೇತ್ರದಲ್ಲಿಯೂ ಸಹ ಶಾಸಕ ಬಿ.ಶಿವಣ್ಣರವರಿಗೆ ನಾವು ಬೆಂಬಲ ಸೂಚಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಸಿಂಗೇನ ಅಗ್ರಹಾರ ಗೌರೀಶ್, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್, ವೆಂಕಟೇಶ್ ಮತ್ತು ಗಡಿನಾಡು ಜೈಬೀಮ್ ವೇದಿಕೆಯ ಪದಾದಿಕಾರಿಗಳು ಭಾಗವಹಿಸಿದ್ದರು.