ಕಾಂಗ್ರೆಸ್ ಗೆಲವು:ಸಂಭ್ರಮಿಸಿದ ಕಾರ್ಯಕರ್ತರು

ಸಿರವಾರ.ಮೇ.೦೨-ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಅವರನ್ನು ಕಾಂಗ್ರೇಸ್ ಅಭ್ಯರ್ಥಿ ಬಸವನಗೌಡ ತುರ್ವಿಹಾಳ ಅವರು ಅಧಿಕ ಮತಗಳ ಅಂತರದಿಂದ ಗೆದ್ದೂ ಪುಃನ ಕ್ಷೇತ್ರವನ್ನು ಕಾಂಗ್ರೆಸ್ ವಶ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿರವಾರ ಬ್ಲಾಕ್ ವತಿಯಿಂದ ದೇವದುರ್ಗ ರಸ್ತೆಯ್ಲಿರುವ ಚುಕ್ಕಿ ತೇಜಸ್ ಮಹಲ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಬ್ಲಾಕ ಅಧ್ಯಕ್ಷ ಅಮರೇಶ ನಾಯಕ,ವೆಂಕಟೇಶ್ ದೊರೆ
ಹೊನ್ನಂದಲಯ್ಯ ,ರಫಿ,ಗಣಿ,ಭಿಮೇಶ,ಅಪ್ಸರ್, ಗುರುದೇವ ನಾಯಕ ಜಕ್ಕಲದಿನ್ನಿ,ಶಿವು ಬೊಂಬಾಯಿ
ಹನುಮೇಶ,ವೆಂಕಟೇಶ್ ಸೇರಿದಂತೆ ಇನ್ನಿತರರು ಇದ್ದರು.