ಕಾಂಗ್ರೆಸ್ ಕೆಟ್ಟು ನಿಂತಿರುವ ಬಸ್: ಬೊಮ್ಮಾಯಿ

ಮುಡಬಿ,ಏ.12- ಕಾಂಗ್ರೆಸ್ ಪಕ್ಷ ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಬಸ್ ನಂತಾಗಿದೆ. ಮುಂದಕ್ಕೂ ಬರುತ್ತಿಲ್ಲ. ಹಿಂದಕ್ಕೂ ಹೋಗುತ್ತಿಲ್ಲ‌ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ

ಕಾಂಗ್ರೆಸ್ ಪಕ್ಷ ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಬಸ್ ನಂತಾಗಿದೆ. ಸಿದ್ದರಾಮಯ್ಯ ಮುಂದಕ್ಕೆ ಸಿಟಿ ಹೊಡೆದರೆ, ಡಿಕೆ ಶಿವಕುಮಾರ್ ಹಿಂದಕ್ಕೆ ಸಿಟಿ ಹೊಡೆಯುತ್ತಾರೆ. ಆದರೆ ಬಸ್ ಹಿಂದಕ್ಕೂ ಹೋಗುತ್ತಿಲ್ಲ. ಮುಂದಕ್ಕೂ ಬರುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಕೆಟ್ಟುನಿಂತಿರುವ ಬಸ್
ಹೀಗಾಗಿ ಯಾರು ಕಾಂಗ್ರೆಸ್ ಬಸ್ಸನ್ನು ಹತ್ತಬೇಡಿ. ಅಭಿವೃದ್ಧಿಯ ರಥ ಬಿಜೆಪಿಯನ್ನು ಬೆಂಬಲಿಸಿ ಎಂದು ಅವರು ಹೇಳಿದರು.

ನಿಯಂತ್ರಣಕ್ಕೆ ಕ್ರಮ:

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಗಲು ಹೊತ್ತಿನಲ್ಲಿ ಕೊರೊನಾ ನಿರ್ಬಂಧ ಕ್ರಮಗಳನ್ನು ಕಟ್ಟುನಿಟ್ಟಗಿ ಅನುಸರಿಸಬೇಕು. ಜನ ಸ್ವಯಂ ಪ್ರೇರಣೆಯಿಂದ ಈ ಕೆಲಸ ಮಾಡಿದರೆ ಮಾತ್ರ ಕೊರೋಣ ನಿಯಂತ್ರಣಕ್ಕೆ ಬರಲು ಸಾದ್ಯ ಎಂದರು

ಕೊರೋನಾ ಸೋಂಕು ಹೆಚ್ಚಳ ನೋಡಿದರೆ ನಿಯಂತ್ರಣ ಕಷ್ಟ ಸಾಧ್ಯ ಗಡಿಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾತ್ರಿ ಕರ್ಫೂ ಗೆ ಜನ ಸಹಕರಿಸುತ್ತಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು