ಕಾಂಗ್ರೆಸ್ ಕುಮ್ಮಕ್ಕಿನಿಂದ ಜಿಹಾದಿ ಮನಸ್ಥಿತಿ ದುಪ್ಪಟ್ಟು: ಸಿ.ಟಿ.ರವಿ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.12:- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಒಂದು ವರ್ಗದ ಜಿಹಾದಿ ಮನಸ್ಥಿತಿ ಹೆಚ್ಚಳವಾಗಿದೆ.ಇದರಿಂದ ಅಮಾಯಕ ಹಿಂದೂ ಕಾರ್ಯಕರ್ತರ ಪ್ರಾಣಗಳು ಬಲಿಯಾಗುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಷಾದ ವ್ಯಕ್ತಡಿಸಿದರು.
ಪಟ್ಟಣದ ಶ್ರೀರಾಂಪುರ ಕಾಲೋನಿಯಲ್ಲಿ ಮೊನ್ನೆ ಹತ್ಯೆಯಾದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಮನೆಗೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ಧಿಗಾರರ ಜೊತೆ ಅವರು ಮಾತನಾಡಿದರು.ವೇಣುಗೋಪಾಲ್ ಕುಟುಂಬದ ಜೊತೆ ನಾವು ನಿಲ್ಲಬೇಕು,ಅವರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು.ವೇಣುಗೋಪಾಲ್ ಹತ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು ಭಾಗಿಯಾಗಿದ್ದು,ವೇಣುಗೋಪಾಲ್ ಏಳಿಗೆಯನ್ನು ಸಹಿಸದೆ ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ.ಕೊಲೆ ಮಾಡಲೇಬೇಕು ಎನ್ನುವ ಉದ್ದೇಶದಿಂದ ಸಂಚು ರೂಪಿಸಿರುವುದು ಸ್ಪಷ್ಟ ಆಗಿದೆ.ಹನುಮ ಜಯಂತಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಉತ್ತಮ ಹೆಸರು ಪಡೆದಿದ್ದ ವೇಣುಗೋಪಾಲ್ ಅವರ ಏಳಿಗೆಯನ್ನು ಸಹಿಸಲಾಗದೆ ಅವನನ್ನು ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ.ಸತ್ಯಾತತೆ ಪೆÇಲೀಸರ ತನಿಖೆಯಿಂದ ಹೊರಬರಬೇಕಿದೆ ಎಂದರು.
ಇತ್ತೀಚಿಗೆ ಬೆಳಗಾವಿಯಲ್ಲಿ ದುಷ್ಕರ್ಮಿಗಳು ಜೈನಮುನಿಯನ್ನು ವಿಕೃತವಾಗಿ ಕೊಲೆ ಮಾಡಿದ್ದು,ತಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತನಾಗಿ ಹಿಂದೂ ಧರ್ಮದ ಉಳಿವಿಗಾಗಿ ದುಡಿಯುತ್ತಿದ್ದ ಸ್ಥಳೀಯ ವೇಣುಗೋಪಾಲ್ ನನ್ನು ಹತ್ಯೆ ಮಾಡಿರುವುದು ಕಾಂಗ್ರೆಸ್ ಪಕ್ಷವು ಒಂದು ವರ್ಗಕ್ಕೆ ಅತಿಯಾದ ಓಲೈಕೆ ಮಾಡುತ್ತಿರುವುದು ಕಾರಣ.ಅವರಲ್ಲಿ ಜಿಹಾದಿ ಮನಸ್ಥಿತಿ ದುಪ್ಪಟ್ಟು ಆಗಲು ಕಾಂಗ್ರೆಸ್ ಪಕ್ಷ ಬೆಂಬಲವೇ ಕಾರಣವಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆ ಹೆಚ್ಚಾಗಿದ್ದು,ಕಾಂಗ್ರೆಸ್ ಪಕ್ಷ ಬಹುಮತ ಪಡೆದ ದಿನದಂದೇ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು,ಇದು ಅವರ ಉನ್ಮಾದ ಮನಸ್ಥಿತಿಯನ್ನು ಬಿಂಬಿಸುತ್ತದೆ.ಕಾಂಗ್ರೆಸ್ ಪಕ್ಷದ ಬೆಂಬಲದಿಂದ ದುಷ್ಕೃತ್ಯಗಳು ನಡೆಯುತ್ತಿದೆ.ಹಿಂದೂ ಪರ ಹೋರಾಟಗಾರರನ್ನು ಮುಗಿಸುವ ಸಂಚು ರಾಜ್ಯದಾದ್ಯಂತ ನಿರಂತರವಾಗಿ ನಡೆಯುತ್ತಿದೆ ಎಂದರು.
ಮಾನವೀಯತೆ ಇಲ್ಲದ ಶಾಸಕರು:
ಕ್ಷೇತ್ರದಲ್ಲಿ ಹಿಂದೂ ಧರ್ಮದ ಯುವಕನೊಬ್ಬನ ಬರ್ಬರ ಹತ್ಯೆಯಾಗಿದ್ದರೂ ಕ್ಷೇತ್ರದ ಶಾಸಕರು ಮತ್ತು ಉಸ್ತುವಾರಿ ಸಚಿವರು ಆದ ಎಚ್.ಸಿ.ಮಹದೇವಪ್ಪ ಸೌಜನ್ಯಕ್ಕಾದರೂ ಭೇಟಿ ನೀಡಿ ಹತ್ಯೆಯಾದ ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಬಹುದಿತ್ತು.ಪಕ್ಕದ ಕ್ಷೇತ್ರದಿಂದ ಆಯ್ಕೆಗೊಂಡು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಕೂಡ ಸಾಂತ್ವನ ಹೇಳುವ ಸೌಜನ್ಯ ತೋರಿಲ್ಲ.ಪಕ್ಷ ಯಾವುದೇ ಇರಲಿ ಕ್ಷೇತ್ರದ ಜನತೆ ಕಷ್ಟದಲ್ಲಿದ್ದಾಗ ಸ್ಪಂದನೆ ಇರಬೇಕು.ಇದು ಕಾಂಗ್ರೆಸ್ ಪಕ್ಷಕ್ಕೆ ಜನತೆ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದರು.
ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸಿ.ಅಶ್ವತ್ ನಾರಾಯಣ್ ಮಾತನಾಡಿ,ಹತ್ಯೆಯಾಗಿರುವ ವೇಣುಗೋಪಾಲ್ ಕುಟುಂಬದ ರಕ್ಷಣೆ ಮತ್ತು ಕುಟುಂಬಕ್ಕೆ ನ್ಯಾಯ ಕೊಡಿಸುವುದು ಬಿಜೆಪಿ ಪಕ್ಷದ ಮೊದಲ ಆದ್ಯತೆ.ಅಮಾಯಕ ವ್ಯಕ್ತಿ ಕೊಲೆ ಆಗಿರುವುದು ತುಂಬಾ ನೋವು ತರುತ್ತದೆ.ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಾಗುವುದು ಎಂದರು.
ಸಂದರ್ಭದಲ್ಲಿ ಶಾಸಕ ಶ್ರೀ ವತ್ಸ, ಮೈಸೂರು ಮಹಾನಗರ ಮಹಾಪೌರ ಶಿವಕುಮಾರ್,ಮಾಜಿ ಶಾಸಕ ಎನ್.ಮಹೇಶ್, ಬಾಲರಾಜು ,ಬಿಜೆಪಿ ವಿಭಾಗೀಯ ಸಂಚಾಲಕ ಮೈ.ವಿ.ರವಿಶಂಕರ್ ,ಮಾಜಿ ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನಪ್ಪ, ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್,ತಾಲ್ಲೂಕು ಅಧ್ಯಕ್ಷ ಕೆ.ಸಿ. ಲೋಕೇಶ್, ಡಾ.ರೇವಣ್ಣ, ಟೌನ್ ಅಧ್ಯಕ್ಷ ಕಿರಣ್,ತೋಟದಪ್ಪ ಬಸವರಾಜು ,ಕೆಬ್ಬೆಹುಂಡಿ ಶಿವಕುಮಾರ್, ಕರೋಹಟ್ಟಿ ಮಹದೇವಯ್ಯ, ಚಿಕ್ಕಮಹದೇವ, ವೆಂಕಟರಮಣಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಡಾ. ವಸಂತಕುಮಾರ್, ಅಪ್ಪಣ್ಣ, ರಂಗುನಾಯಕ, ತೊಂಟೇಶ್,ಮೋಹನ, ಮಾದೇಶ, ಭಾಗ್ಯಮ್ಮ, ಚೌಹಳ್ಳಿ ಸಿದ್ದರಾಜು ಇತರರು ಹಾಜರಿದ್ದರು.