ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಯಂತೋತ್ಸವ ಪುಣ್ಯತಿಥಿ ಸರಳ ಆಚರಣೆ

ಸೇಡಂ,ಅ.31 ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ, ಶ್ರೀ ಮತಿ ಇಂದಿರಾಗಾಂಧಿಯವರ ಪಣ್ಯಾದಿನ, ಹಾಗೂ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ ರವರ ಜನ್ಮದಿನಾಚರಣೆ ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ವರರಾವ್ ಮಾಲಿ ಪಾಟೀಲ್, ಬಸವರಾಜ ಪಾಟೀಲ್ ಊಡುಗಿ, ಅನಂತಯ್ಯ ಮಸ್ತಜರ, ರಾಮಯ್ಯ ಪೂಜಾರಿ, ಸಂತೋಷ್ ಕುಲಕರ್ಣಿ, ಸಂತೋಷ್ ತಳವಾರ್, ಸಿದ್ದು ನಾಯ್ಕೋಡಿ, ನಾಜಿಮೋದಿನ್, ರವೀಂದ್ರ, ಗೋಪಾಲ್ ರಾಥೋಡ್, ಭೀಮಯ್ಯ , ರಾಜು ಹಡಪದ್, ಸತ್ತರ್ ನಾಡೇಪಲ್ಲಿ , ಅಂಕಿತ ಜೋಷಿ, ಕಾಶಿನಾಥ್ ನಾಟಿಕರ್, ವಿಲಾಸ್ ಗೌತಮ್ ನಿಡಗುಂದ , ಪ್ರಶಾಂತ್ ಸೇಡಂಕರ್, ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.