
ನವದೆಹಲಿ,ಆ.20- ಕಾಂಗ್ರೆಸ್ ಪಕ್ಷದ ಅತ್ತುನ್ನತ್ತ ಕಾರ್ಯಕಾರಿ ಸಮಿತಿಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರಿಷ್ಕರಣೆ ಮಾಡಿದ್ದು ಹಲವು ಹಿರಿ- ಕಿರಿಯ ಮುಖಗಳಿಗೆ ಅವಕಾಶ ಮಡಿಕೊಡಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನವಿಲ್ಲ.ಪಕ್ಷದ ಸಂಘಟನೆ ಪರಿಷ್ಕರಣೆ ಮಾಡುವಂತೆ ಜಿ-23 ಗುಂಪಿನ ನಾಯಕರು ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿದ್ದ ಅವದೀಯಲ್ಲಿ ಪತ್ರಬರೆದು ಕೆಂಗಣ್ಣಿಗೆ ಗುರಿಯಾಗಿದ್ದ ನಾಯಕರಿಗೂ ಕಾರ್ಯಕಾರಿ ಸಮಿತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಮುಂಬರುವ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದ ಮಾಜಿ ಸಚಿವರಾದ ಶಶಿ ತರೂರು, ಮನೀಶ್ ತಿವಾರಿ ಸೇರಿದಂತೆ ಹಲವು ಹೊಸ ಮುಖಗಳಿಗೂ ಅವಕಾಶ ಮಾಡಿಕೊಡಲಾಗಿದೆ.
ಸಚಿನ್ ಪೈಲೆಟ್, ಅಜಯ್ ಮಾಕನ್, ರಾಜೀವ್ ಶುಕ್ಲಾ, ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವರಿಗೆ ಅವಕಾಶ ಮಾಡಿಕೊಡಲಾಗಿದೆ.
ಯಾರಿಗೆಲ್ಲಾ ಅವಕಾಶ:
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೋನಿಯಗಾಂಧಿ, ರಾಹುಲ್ ಗಾಂಧಿ,ಡಾ. ಮನಮೋಹನ್ ಸಿಂಗ್, ಅಧೀರ್ ರಂಜನ್ ಚೌಧರಿ,ಎಕೆ ಆಂಟನಿ, ಅಂಬಿಕಾ ಸೋನಿ, ಮೀರಾ ಕುಮಾರ್, ದ್ವಿಗ್ವಿಜಯ್ ಸಿಂಗ್, ಪಿ ಚಿದಂಬರಮ್, ಮುಕುಲ್ ವಾಸ್ನಿಕ್, ಅಭಿಷೇಕ್ ಮನು ಸಿಂಘ್ಚಿ, ರಣದೀಪ್ ಸಿಂಗ್ ಸುರ್ಜೆವಾಲ, ಕುಮಾರಿ ಶೆಲ್ಜಾ ಸೇರಿದಂತೆ ಅನೇಕರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ರಾಜ್ಯದ ಯಾರಿಗೆ ಅವಕಾಶ;


ಖಾಯಂ ಆಹ್ವಾನಿತರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿ ಪ್ರಸಾದ್ ಅವರಿಗೆ ಅವಕಾಶ ಮಾಡಿಕೊಡಲಾಗಿದೆಮ

ಹಲವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ;
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಪಕ್ಷದ ಪಧಾದಿಕಾರಿಗಳನ್ನು ಹೊಸದಾಗಿ ನೇಮಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಸಾಲಿನಲ್ಲಿ ಹೆಚ್ಚುವರಿಯಾಗಿ
ರಾಜ್ಯದವರಾದ ಸಯ್ಯದ್ ನಾಸೀರ್ ಹುಸೇನ್, ದೀಪ್ ದಾಸ್ ಮುನ್ಷಿ, ಕೆ.ಸಿ ವೇಣುಗೋಪಾಲ್ ಹಲವರಿಗೆ ಅವಕಾಶ ಮಾಡಿಕೊಡಲಾಗಿದೆ. ಕನ್ನಯ್ಯ ಕುಮಾರ್,
ಸೇರಿದಂತೆ ಹಲವರಿಗೆ ಅವಕಾಶ ಮಾಡಿಕೊಡಲಾಗಿದೆ
ತರೂರು ಸಂತಸ
ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ನೇಮಕಮಾಡಿದಕ್ಕರ ಕಾಂಗ್ರೆಸ್ ಅಧ್ಯಕ್ಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರದ ಮಾಜಿ ಸಚಿವ ಶಶಿ ತರೂರು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.