ಕಾಂಗ್ರೆಸ್ ಕಾರ್ಯಕರ್ತರ ಸಭೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ : ಮುಂಬರುವ ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಟಿಕೆಟ್‍ಗಾಗಿ ಕಾಂಗ್ರೆಸ್ ಪಕ್ಷವು ಅರ್ಜಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಎಂ.ಪಿ ಲತಾಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪಟ್ಟಣದ ಹಡಗಲಿ ರಸ್ತೆಯಲ್ಲಿನ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರ, ಮುಖಂಡರ ಹಾಗೂ ಅಭಿಮಾನಿಗಳ ಪೂರ್ವಭಾವಿ ಸಭೆ ಜರುಗಿತು.
ಹರಪನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ರವರು ಕ್ಷೇತ್ರಕ್ಕಾಗಿ ಶಾಶ್ವತ ಯೋಜನೆಗಳ ಕೈಗೊಂಡ ಬಗ್ಗೆ ಸ್ಮರಿಸುತ್ತಾ ಪಕ್ಷದ ಹೈಕಮಾಂಡ್ ಇಲ್ಲಿ ಎಂ.ಪಿ. ಲತಾರವರಿಗೆ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಮಾಡಿದರೆ ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮದು ಎಂದು ಇಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಟಿಕೆಟ್‍ಗೆ ಅರ್ಜಿ ಸಲ್ಲಿಸಲು ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಪಡೆಯುವ ಸಂಬಂಧ ಈ ಸಭೆ ಆಯೋಜಿಸಿದ್ದೇವೆ ಎಂದರು.
ತಮ್ಮೆಲ್ಲರ ಅಭಿಪ್ರಾಯದಂತೆ ನಾನು ನಿಮ್ಮೊಂದಿಗೆ ಇರುತ್ತೇನೆ.ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡೋಣ ಎಂದು ಕಾರ್ಯ ಕರ್ತರಿಗೆ ಕರೆ ನೀಡಿದರು.
ತಂದೆ ದಿ. ಎಂ.ಪಿ.ಪ್ರಕಾಶ್ ಹಾಗೂ ಸಹೋದರ ದಿ. ಎಂ.ಪಿ.ರವೀಂದ್ರ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಮಾಡಬೇಕಾಗಿರುವ ಕೆಲಸಗಳನ್ನು ಪೂರ್ಣಗೊಳಿಸಲು ನಾನು ರಾಜ ಕಾರಣಕ್ಕೆ ಬಂದಿದ್ದು,ಈ ನೆಲದ ಸೊಸೆಯಾಗಿರುವ ನಾನು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯದ ಮೇಲೆ ಕೆಲಸ ಮಾಡುವುದಾಗಿ ಹೇಳಿದ ಅವರು, ನನ್ನ ಮೇಲೆ ಅಭಿಮಾನವಿಟ್ಟು ಟಿಕೆಟ್‍ಗಾಗಿ ದೇಣಿಗೆ ನೀಡಿದ ಹಣವನ್ನು ಪಕ್ಷಕ್ಕೆ ದೇಣಿಗೆಯಾಗಿ ನೀಡುವೆ ಎಂದರು.
ರೂ 2 ಲಕ್ಷ ದೇಣಿಗೆ ನೀಡಿದ ಕಾರ್ಯಕರ್ತರು ಟಿಕೆಟ್ ಗೆ ಅರ್ಜಿ ಸಲ್ಲಿಸುವಾಗ ಕೆಪಿಸಿಸಿ ನಿಗದಿ ಪಡಿಸಿರುವ ಶುಲ್ಕ 22 ಲಕ್ಷಗಳನ್ನು ಕಾರ್ಯಕರ್ತರು, ಅಭಿಮಾನಿ ಗಳು ಮುಖಂಡರು, ದೇಣಿಗೆ ರೂಪದಲ್ಲಿ ನೀಡಿ ಅಭಿಮಾನ ಮೆರೆದರು.
ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು, ತಾಪಂ ಮಾಜಿ ಸದಸ್ಯರು, ವಿವಿಧ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು. ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಅಬ್ದುಲ್ ರಹ ಮಾನ,ಟಿ. ವೆಂಕಟೇಶ್, ಹಲುವಾಗಲು ಗ್ರಾ.ಪಂ. ಅಧ್ಯಕ್ಷ ರುದ್ರಪ್ಪ, ತೆಲಿಗಿ ಗ್ರಾ.ಪಂ ಅಧ್ಯಕ್ಷ ಹಾಲಪ್ಪ, ನಂದಿಬೇವೂರು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರ ಶೇಖರ, ಮುಖಂಡರಾದ ಎಚ್.ಎಂ.ಮಲ್ಲಿಕರ್ಜುನ್, ಇ.ಓ. ಕೊಟ್ರಯ್ಯ,ಹುಲಿಕಟ್ಟಿ ಚಂದ್ರಪ್ಪ, ರಾಮಣ್ಣ, ಚಂದ್ರೆ ಗೌಡ್ರು, ಬಿ.ಕೆ.ಪ್ರಕಾಶ್, ಕೆ.ಎಂ. ಬಸವರಾಜಯ್ಯ, ಮೈದೂರು ಕುಬೇರಗೌಡ್ರು, ಬಾಗಳಿ ಬಿ.ಬಿ.ಹೊಸೂರಪ್ಪ, ಮತ್ತಿಹಳ್ಳಿ ರಾಮಣ್ಣ, ಚಿಕ್ಕಹಳ್ಳಿ, ಮಂಜುನಾಥ,ಗಂಗಾಧರಪ್ಪ, ರೇಣುಕಾಬಾಯಿ, ಕೆ.ಗೋಣೆಪ್ಪ , ಜಯಲಕ್ಷ್ಮಿ, ಭಾಗ್ಯಮ್ಮ, ಅಗ್ರಹಾರ ಅಶೋಕ, ಬಸವರಾಜ, ಭರಮನಗೌಡ, ಅಂಜಿನಪ್ಪ, ಹೇಮಂತ, ಕೊಟ್ಟ ಗೌಡ್ರು, ಎ.ಎಂ.ವಿಶ್ವನಾಥ, ಮಲ್ಲಿಕಾರ್ಜುನಗೌ ಡ, ಉಮಾ, ರತ್ನಮ್ಮ ಹಲುವಾಗಲು, ಶಮಿವುಲ್ಲಾ, ಇರ್ಫಾನ, ತೆಲಿಗಿ ಮ0ಜುನಾಥ, ಹೇಮರಾಜ ನಾಯ್ಕ, ಎಲ್. ಮ0ಜ್ಯನಾಯ್ಕ, ಶಿವಾಜಿ ನಾಯ್ಕ, ಉದಯಶಂಕರ, ಎಂ.ಬಸವರಾಜ, ಶಿವರಾಜ ಸೇರಿದಂತೆ ಇತರರು ಇದ್ದರು.