ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಠಾಣೆ ಮುಂದೆ ಪ್ರತಿಭಟನೆ

ಮಸ್ಕಿ,ಮೇ.೪- ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರು ಮಾರಣಾಂತಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪಟ್ಟಣದ ಠಾಣೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿಯ ಡಿಕೆ. ಸರ್ಕಲ್ ಬಳಿ ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತ ಕೃಷ್ಣ ಚಿಗರಿ ಮೇಲೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಪುತ್ರರು ಮತ್ತು ಇತರರು ಸೇರಿ ಚಿಗರಿ ಮೇಲೆ ಹಲ್ಲೆ ನಡೆಸಿದ್ದಾರೆ ತಡೆಯಲು ಬಂದ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ಮಾಡಿದ ನಂತರ ಕಾಂಗ್ರೆಸ್ ಮುಖಂಡ ಸಿದ್ದಣ್ಣ ಹೂವಿನ ಬಾವಿ ಅವರ ಮನೆಗೆ ನುಗ್ಗಲು ಪ್ರಯತ್ನ ಮಾಡಿದ ನಂತರ ಕಾಂಗ್ರೆಸ್ ಕಾರ್ಯಕರ್ತೆ ರಾಜೇಶ್ವರಿ ನಾಯಕ ಮನೆಗೆ ನುಗ್ಗಿಹಲ್ಲೆ ಮಾಡಿರುವಕಿಡಿಗೇಡಿಗಳನ್ನು ಕೂಡಲೆ ಬಂಧಿಸ ಬೇಕು ಎಂದು ಕಾರ್ಯಕರ್ತರು ಪ್ರತಭಟನೆ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಸುದ್ದಿ ತಿಳಿದು ಶಾಸಕ ಬಸನಗೌಡ ತುರ್ವಿಹಾಳ ಠಾಣೆಗೆ ಧಾವಿಸಿ ಬಂದರು ಕಾಂಗ್ರೆಸ್ ಕಾರ್ಯ ಕರ್ತರ ಮೇಲೆ ದೌರ್ಜನ್ಯ ಮಾಡಿದ ಆರೋಪಿಗಳ ವಿರುದ್ದ ಕೇಸ್ ದಾಖಲಿಸಿ ಬಂಧಿಸ ಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು.
ಶಾಸಕ ಬಸನಗೌಡ ತುರ್ವಿಹಾಳ ಠಾಣೆಗೆ ಬಂದ ಸುದ್ದಿಕೇಳಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಬಳಿ ನೆರದಿದ್ದ ಕಾರಣ ಮುಂಜಾಗ್ರತೆ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಕೈ ಗೊಳ್ಳಲಾಗಿತ್ತು. ಹಲ್ಲೆ ಕೋರರ ವಿರುದ್ದ ಕೇಸ್ ದಾಖಲಿಸಿ ಕೊಳ್ಳಲು ಪೊಲೀಸರು ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಬಳಿ ಧರಣಿ ನಡೆಸಲು ಮುಂದಾದರು ಈ ವೇಳೆ ಕಾರ್ಯ ಕರ್ತರು ಪೋಲಿಸರ ಜತೆ ವಾಗ್ವಾದ ನಡೆಸಿದರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸಿದ ಸುದ್ದಿ ಕೇಳಿ ಕೆ. ಕರಿಯಪ್ಪ ಸಿಂಧನೂರು, ಬಸನಗೌಡ ಬಾದರ್ಲಿ, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಸೇರಿದಂತೆ ಅನೇಕ ಮುಖಂಡರು ಪಟ್ಟಣಕ್ಕೆ ದೌಡಾಯಿಸಿ ಬಂದು ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು ಹಲ್ಲೆ ಕೋರರ ವಿರುದ್ದ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನು ಬಂಧಿಸುವ ತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಠಾಣೆ ಬಳಿ ಠಿಕಾಣಿ ಹೂಡಿರುವ ಕಾರಣ ಬಿಗುವಿನ ವಾತಾವರಣ ಉಂಟಾಗಿತ್ತು ಹಲ್ಲೆ ಕೋರರ ವಿರುದ್ದ ಪ್ರಕರಣ ದಾಖಲಾದ ನಂತರ ಕಾರ್ಯಕರ್ತರು ಜಾಗ ಖಾಲಿ ಮಾಡಿದರು.
ಪ್ರಕರಣ ದಾಖಲು ಃ ಹಲ್ಲೆ ಪ್ರಕರಣಕ್ಕೆ ಸಬಂಧ ಪಟ್ಟಂತೆ ರವಿ ಪಾಟೀಲ್, ಪ್ರಸನ್ನ ಪಾಟೀಲ್, ಚೇತನ ಪಾಟೀಲ್, ಶ್ರೀಧರ ಪಾಟೀಲ್ ಕಡಬೂರು,ಶ್ಯಾಮೀದ್, ರಾಮರೆಡ್ಡಿ ಗೌ ಡ, ವಿಶ್ವ,ಶರಣೇ ಗೌ ಡ, ಮಂಜುನಾಥ, ಶರಣಯ್ಯ ಸೊಪ್ಪಿ ಮ ಠ, ಶರಣಪ್ಪ ತೋರಣ ದಿನ್ನಿ ,ಮೌನೇಶ ನಾಯಕ, ರಾಕೇಶ ಪಾಟೀಲ್, ವಿರೇಶ ಬಳಿ ಗಾರ ವಿರುದ್ದ ಹಲ್ಲೆ, ಮಾನಭಂಗಕ್ಕೆ ಪ್ರಯತ್ನ ಅಡಿ ಯಲ್ಲಿಎರಡು ಪ್ರಕರಣ ಗಳು ದಾಖಲಾಗಿವೆ.