ಕಾಂಗ್ರೆಸ್ ಕಾರ್ಯಕರ್ತರಿಂದ ಕೊರೋನಾ ಜಾಗೃತಿ

ಚಿಂಚೋಳಿ ಮೇ 19: ತಾಲೂಕಿನ ಐನಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕ ಘಟಕ ವತಿಯಿಂದ ಕೋವಿಡ್ 19 ಸಹಾಯ ಕೇಂದ್ರದಲ್ಲಿ ಮಾಸ್ಕಗಳನ್ನು ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದ ಜನರಆರೋಗ್ಯ ತಪಾಸಣೆಯನ್ನು ಮಾಡಿದರು ಮತ್ತು ಕೋರೋನ ಸೋಂಕು ಬಗ್ಗೆ ಗ್ರಾಮದ ಜನರಿಗೆ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ. ಐನಾಪುರ ಗ್ರಾಮದ ಕಾಂಗ್ರೆಸ್ ಮುಖಂಡರಾದ ವೀರಶೆಟ್ಟಿ ಪಾಟೀಲ. ಅವಿನಾಶ ಘಾಟಗೆ. ಅಶೋಕ ಮಾಲು. ನಾಗಶೆಟ್ಟಿ ಕೌನಲ್ಲಿ. ಸುರೇಶ ಗುತ್ತೇದಾರ. ಚಂದ್ರು ಗುತ್ತೇದಾರ. ಬಲಭೀಮ ಜಾಧವ. ವೆಂಕಟ ಗರಲ. ವಿಜಯಕುಮಾರ ಮೇಲಕೇರಿ. ಕಾಶಿನಾಥ ಪಂಚಲ. ಮತ್ತು ಐನಾಪುರ ಗ್ರಾಮಸ್ಥರು ಇದ್ದರು