ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪ್ರತಾಪಗೌಡ ಬೆಂಬಲಿಗರಿಂದ ಹಲ್ಲೆ

ಮಸ್ಕಿ,ನ.೨೦-ಕ್ಷೇತ್ರದ ಉಪ ಚುನಾವಣೆ ಹೊಸ್ತಿಲಿನಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಮುದಗಲ್ ಪಟ್ಟಣದಲ್ಲಿ ಅಮರಪ್ಪ ಕಡದರಾಳ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪ್ರತಾಪಗೌಡ ಬೆಂಬಲಿಗರು ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು ಉಪ ಚುನಾವಣೆ ಸನಿಹದಲ್ಲಿ ಪ್ರತಾಪಗೌಡ ಪಾಟೀಲ್ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವ ಕೊಡ್ಲಿ, ಬಡಿಗಿ ಸಂಸ್ಕ್ರತಿ ತರಲು ಪ್ರಯತ್ನ ನಡೆಸಿದ್ದಾರೆ ಕಾರ್ಯಕರ್ತರು ಇಂತಹ ಗೊಡ್ಡು ಬೆದರಿಕೆಗಳಿಗೆ ಕೈ ಕಾರ್ಯಕರ್ತರು ಬಗ್ಗುವುದಿಲ್ಲ ಚುನಾವಣೆಯಲ್ಲಿ ಮತದಾರರು ಪ್ರತಾಪಗೌಡ ಪಾಟೀಲ್ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಾದರ್ಲಿ ಹೇಳಿದರು.
ಪ್ರತಾಪಗೌಡ ಪಾಟೀಲ್ ಬಿಜೆಪಿಯ ಹಣ, ಅಧಿಕಾರದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆಪರೇಷನ್ ಕಮಲಕ್ಕೆ ಒಳಗಾಗಿ ಕ್ಷೇತ್ರದ ಮತದಾರರಿಗೆ ದ್ರೋಹ ಮಾಡಿದ್ದಾರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿದ್ದ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಮಸ್ಕಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಅಭಿವೃದ್ದಿ ಗೋಸ್ಕರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆನೆ ಎಂದು ಸುಳ್ಳು ಹೇಳುವ ಪ್ರತಾಪಗೌಡ ಪಾಟೀಲ್ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹಣಕ್ಕಾಗಿ ಮಾರಾಟ ವಾಗಿರುವ ವ್ಯಕ್ತಿಯನ್ನು ಕ್ಷೇತ್ರದ ಸ್ವಾಭಿಮಾನಿ ಮತದಾರರು ಬುದ್ದಿ ಕಲಿಸಬೇಕು.
ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರ ಕೈ ಹಿಡಿಯ ಬೇಕು ಎಂದು ಬಸನಗೌಡ ಬಾದರ್ಲಿ ಮನವಿ ಮಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹನುಮೇಶ ಬಾಗೋಡಿ ನಗರ ಘಟಕ ಅಧ್ಯಕ್ಷ ಹುಸೇನ್ ಭಾಷಾ , ಮಂಜುನಾಥ ಗುಡುದೂರು ,ಬಳಗಾನೂರು, ರೆಡ್ಡೆಪ್ಪ ನಾಗರ ಬೆಂಚಿ, ವೆಂಕಟೇಶ ರಾಗಲಪರ್ವಿ, ಹಬೀ ಪಾಟೀಲ್, ಅಮರೇಶ ಹತ್ತಿಗುಡ್ಡ ಇನ್ನಿತರ ಮುಖಂಡರಿದ್ದರು.

(೧೯,ನ.ಎಂಎಸ್ಕೆ ಪೋಟೋ೦೧)