ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಪುಸ್ತಕ ವಿತರಣೆ

ದಾವಣಗೆರೆ.ಸೆ.೨೧;  ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ವಿಭಾಗದಿಂದ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳು ಮತ್ತು ಆಂಜನೇಯ ಮಿಲ್ ನ 31 ನೇ ವಾರ್ಡಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಣ್ಣುಗಳ ವಿತರಣೆ ಮಾಡುವ ಮೂಲಕ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ 54ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಹೆಚ್. ಸುಭಾನ್ ಸಾಬ್.31 ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಪಾಮೆನಹಳ್ಳಿ ನಾಗರಾಜ್, ರಾಷ್ಟ್ರೀಯ ಯೂತ್ ಕಾಂಗ್ರೆಸ್ ವಕ್ತಾರರಾದ ಮೈನುದ್ದೀನ್ ಹೆಚ್ ಜೆ, ಉತ್ತರ ವಲಯದ ಕಾರ್ಮಿಕ ವಿಭಾಗ ಅಧ್ಯಕ್ಷರಾದ ಗೊಪಿ ದೇವರಮನಿ, ಬಸವಾಪಟ್ಟಣ ಕಾರ್ಮಿಕ ಅಧ್ಯಕ್ಷರಾದ ಮಂಜುನಾಥ. ಈ, ಕಾರ್ಯದರ್ಶಿ ಸೈಫುಲ್ಲಾ ಬಾಡ,ಪ್ರಕಾಶ್.. ವೀರಭದ್ರಪ್ಪ..ಅಣ್ಣಪ್ಪ.. ಮಂಜುಳಮ್ಮ. ರೇಣುಕಮ್ಮ ಅಮಿದ ಭಾನು ಸರೋಜಮ್ಮ ಬಸವರಾಜ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು..