ಕಾಂಗ್ರೆಸ್ ಕಾಡುಗೊಲ್ಲರ ಬೃಹತ್ ಸಮಾವೇಶ

ಹಿರಿಯೂರು.ಮಾ.16- ತಾಲೂಕಿನ ಜವನಗೊಂಡನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾಡುಗೊಲ್ಲರ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ಮಾಜಿ ಸಚಿವರಾದ ಡಿ ಸುಧಾಕರ್ ಮಾತನಾಡಿ ಕಾಡುಗೊಲ್ಲರ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ, ಮುಂಬರುವ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿ ಜಯಗಳಿಸಿ ಕಾಡುಗೊಲ್ಲ ಸಮಾಜದ ಎಸ್ ಟಿ ಮೀಸಲಾತಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಬರವಸೆ ನೀಡಿದರು. ಗೊಲ್ಲರಹಟ್ಟಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಮಹಿಳಾ ಭವನ ನಿರ್ಮಾಣ, ಸಮುದಾಯ ಭವನಗಳು, ವಸತಿ ಸೌಲಭ್ಯ ಸೇರಿದಂತೆ ಸಾಕಷ್ಟು ಪ್ರಗತಿಪರ ಕೆಲಸ ಕಾರ್ಯಗಳನ್ನು ನಡೆಸಿದ್ದೇನೆ ಎಂದರು. ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಕಂಡುಬಂದಿದೆ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಸರ್ಕಾರ ರಚಿಸಿದ್ದಲ್ಲಿ ಪ್ರಗತಿಪರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಗೀತಾ ನಂದಿನಿ ಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕಲ್ಲಹಟ್ಟಿ ತಿಪ್ಪೇಸ್ವಾಮಿ, ಪಿ ಎಸ್ ಪಾತಯ್ಯ, ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜನಿ ಯಾದವ್, ಜ್ಯೋತಿ ಲಕ್ಷ್ಮಿ, ಕರಿಯಾಲ ಗ್ರಾಮ ಪಂಚಾಯಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಯಾದವ್, ಪ್ರಭು ಯಾದವ್, ಕೃಷ್ಣ ಪೂಜಾರಿ, ಪಿ. ಆರ್ ದಾಸ್, ಮಂಜುನಾಥ್, ದಿಂಡಾವರ ಮಹೇಶ್, ಕೇಶವಮೂರ್ತಿ, ಮಹಾಲಿಂಗಪ್ಪ, ಪ್ರಶಾಂತ್,   ತಿಮ್ಮಣ್ಣ ,ಚೇತನ್ ಕುಮಾರಿ ಸೇರಿದಂತೆ ಕಾಡುಗೊಲ್ಲ ಸಮಾಜದ ಅನೇಕ ಯುವ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.