ಕಾಂಗ್ರೆಸ್ ಕಛೇರಿಯಲ್ಲಿ ನೆಹರು ಜನ್ಮದಿನಾಚರಣೆ

ಬಳ್ಳಾರಿ, ನ.14: ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅಧ್ಯಕ್ಷತೆಯಲ್ಲಿ ದೇಶದ ಮೊದಲ ಪ್ರಧಾನಿಗಳು, ಪಕ್ಷದ ಧೀಮಂತ ನಾಯಕ, ಶದ ಮೊದಲ ಪ್ರಧಾನಿಯಾಗಿ ಧೀರ್ಘಾವಧಿ ಆಡಳಿತವನ್ನು ನಡೆಸಿದ ದೇಶದ ಏಕೈಕ ಪ್ರಧಾನಿಗಳಾದ ಪಂಡಿತ ಜವಹರ್ ಲಾಲ್ ನೆಹರು ರವರ ಜನ್ಮದಿನವಾದ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಹಾತ್ಮರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. ಅವರ ಶಾಂತಿಯುತ, ಅಹಿಂಸಾತ್ಮಕ ಜೀವನ ಸಿದ್ಧಾಂತಗಳನ್ನು ಪಾಲಿಸಲು ಮನವಿ ಮಾಡಲಾಯಿತು.
ಮೌನಾಚರಣೆ
ನಿನ್ನೆ ಹೃದಾಯಘಾತದಿಂದ ಮರಣ ಹೊಂದಿದ ಜಿಲ್ಲೆಯವರಾದ ರವಿ ಬೆಳೆಗೆರೆ ರವರನ್ನು ಸ್ಮರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಕಲ್ಲುಕಂಭ ಪಂಪಾಪತಿ, ಉಪಾಧ್ಯಕ್ಷ ಕಂದರಿ ನಾಗರಾಜ, ಯತೀಂದ್ರ ಗೌಡ, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷ ಅಸುಂಡಿ ನಾಗರಾಜ ಗೌಡ, ಬ್ರೂಸ್ ಪೇಟ್ ಬ್ಲಾಕ್ ಅಧ್ಯಕ್ಷ ಹರ್ಷದ್ ಅಹಮ್ಮದ್ ಗಣಿ, ಪ್ರಧಾನ ಕಾರ್ಯದರ್ಶಿಗಳಾದ ಡಿ. ಅಯಾಜ್ ಅಹಮ್ಮದ್, ಕಾಂತಿ ನೋಹ ವಿಲ್ಸನ್, ಕೆ.ಬಿ.ಗೋಪಿಕೃಷ್ಣ, ಕಾರ್ಯದರ್ಶಿಗಳಾದ ವೈ.ಶ್ರೀನಿವಾಸುಲು, ಎಂ.ಶಾಂತಮ್ಮ, ಕೆ.ತಾಯಪ್ಪ, ಜೈ ಕುಮಾರ್ ನಾಯುಡು, ಅಲಿವೇಲು ಸುರೇಶ್, ಗೋಣಾಳ್ ನಾಗಭೂಷಣ ಗೌಡ, ಜಿ.ಹಮೀದ್ ಭಾಷ, ಶಮೀಮ್ ಜಕ್ಲಿ, ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಂ.ಸೂರ್ಯನಾರಾಯಣ, ಯುವ ಕಾಂಗ್ರೆಸ್ ಅಧ್ಯಕ್ಷ ಹನುಮ ಕಿಶೋರ್, ಎಸ್.ಸಿ.ಘಟಕದ ಆದ್ಯಕ್ಷ ಎಂ.ಪಿ.ಎರುಕಲ್ಸ್ವಾಣಮಿ, ಸೇವದಳ ಅಧ್ಯಕ್ಷರಾದ ಡಿ.ಮೊರಾರ್ಜಿರೆಡ್ಡಿ, ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಪರ್ವಿನ್ ಭಾನು, ಕಾ.ಕಾ.ಸ ಸದಸ್ಯರು ಡಿ.ಲಕ್ಷ್ಮಿ ದೇವಿ, ಮುಖಂಡರಾದ ಪಿ.ರಂಗಸ್ವಾಮಿ, ಕೆ.ಮೂರ್ತಿ, ಬಿ.ಎ.ಪದ್ಮಾವತಿ, ಎಂ.ಪಿ.ಕಮಲ, ಜಿ.ಶೇಖಮ್ಮ, ಪಿ.ಯೆರ್ರೆಮ್ಮ, ಮಹೇಶ್, ಲಿಂಗರಾಜ, ಬುಜ್ಜಿ, ಜಿ.ಅನಿಲ್ ಕುಮಾರ್, ಉದಯಕುಮಾರ್, ಶಿವಕುಮಾರ್, ಶಿವಶಂಕರ್, ಪ್ರವೀಣ್ ಕುಮಾರ್, ಮಹಮ್ಮದ್ ಆಸೀಫ್, ಪೆನ್ನಯ್ಯ, ಸುಭಾನ್, ನಿತಿನ್ ಮತ್ತು ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.