ಕಾಂಗ್ರೆಸ್ ಕಛೇರಿಯಲ್ಲಿ ಧ್ರುವನಾರಯಣ್‌ರವರ ಶ್ರದ್ಧಾಂಜಲಿ

ಲಿಂಗಸುಗೂರು,ಮಾ.೧೨- ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷರು ಸದಾ ಹಸನ್ಮುಖಿ ನಾಯಕರು ಮಾಜಿ ಸಂಸದ ಧ್ರುವನಾರಾಯಣ್‌ರವರ ಶ್ರದ್ಧಾಂಜಲಿಯನ್ನು ಶಾಸಕ ಡಿ.ಎಸ್ ಹೊಲಗೇರಿ ನೇತೃತ್ವದಲ್ಲಿ ಸಲ್ಲಿಸಿದರು.
ಪಟ್ಟಣದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದಿ. ಮಾಜಿ ಸಂಸದ ಧ್ರುವರಾರಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ಮಾತನಾಡಿದ ಡಿ.ಎಸ್ ಹೂಲಗೇರಿ ಅವರು, ಯಾವದೇ ವಿಷಯದಲ್ಲಿ ಸರಳತೆಯನ್ನು ತೋರಿಸಿದ ಮಾಜಿ ಸಂಸದ ಅವರು, ಬಡವರ ಕಷ್ಟಗಳನ್ನು ಸ್ಪಂದಿಸುತ್ತಿದ್ದರು ಮತ್ತು ಸಂಘಟನೆಯಿಂದ ಬೆಳೆದು ಶಾಸಕರಾಗಿ ಹಾಗೂ ಸಂಸದರಾಗಿ ಕೆಲಸ ಮಾಡಿದ್ದಾರೆ, ಅವರ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದರು ಕೂಡ ಸಾಮಾನ್ಯ ಕಾರ್ಯಕರ್ತರಂತೆ ಇದ್ದರು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಶರಣಪ್ಪ ಮೇಟಿ, ಪಾಮಯ್ಯ ಮುರಾರಿ, ಅಮರಗುಂಡಪ್ಪ ಮೇಟಿ, ಉಪಾಧ್ಯಕ್ಷ ಮಹ್ಮದ ರಫಿ, ಪ್ರಮೋದ್ ಕುಲಕರ್ಣಿ, ಗುಂಡಪ್ಪ ನಾಯಕ, ಡಿ.ಜಿ ಗುರಿಕಾರ್, ಸಂಗಣ್ಣ ದೇಸಾಯಿ, ಗದ್ದೆನಗೌಡ ಪಾಟೀಲ್ ಮಲ್ಲಣ್ಣ ವಾರದ ಸಿದ್ದಪ್ಪ ಪರಂಗಿ ಸೇರಿದಂತೆ ಇದ್ದರು.