ಕಾಂಗ್ರೆಸ್ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ

ಹುಬ್ಬಳ್ಳಿ, ನ 3- ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 65 ನೇ ಕನ್ನಡ ರಾಜ್ಯೋತ್ಸವ ಸಡಗರದಿಂದ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ಮಾತನಾಡಿ ಕನ್ನಡ ನಾಡು,ನುಡಿ, ನೆಲ,ಜಲ,ಹಾಗೂ ನಮ್ಮ ಭವ್ಯವಾದಂತಹ ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳುವುದರ ಮೂಲಕ ಕನ್ನಡವನ್ನು ಉಳಿಸುವ ಕಾರ್ಯಕ್ಕೆ ಮುಂದಾಗುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿ ಕನ್ನಡವೇ ನಿತ್ಯ.ಕನ್ನಡವೇ ಸತ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ್ ಗೌರಿ.ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನ ಅಸುಂಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಜಿಲ್ಲಾ ಕಾಂಗ್ರೆಸ್ ವಕ್ತಾರ ಗಂಗಾಧರ ದೊಡ್ಡವಾಡ, ಉಣಕಲ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಗನಿ ವಲಿಅಹ್ಮದ್, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ಸಾಗರ ಹಿರೇಮನಿ, ಜಿಲ್ಲಾ ಮೈನಾರಿಟಿ ಅಧ್ಯಕ್ಷ ಶಾರೂಖ ಮುಲ್ಲಾ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ರವಿ ಬಡ್ನಿ, ಜಿಲ್ಲಾ ಸೇವಾ ದಳದ ಅಧ್ಯಕ್ಷ ಡಿಎಂ.ದೊಡ್ಡಮನಿ, ಮಾಜಿ ಪಾಲಿಕೆ ಸದಸ್ಯ ವಿಜನಗೌಡ ಪಾಟೀಲ, ಡಿಸಿಸಿ ಪದಾಧಿಕಾರಿಗಳಾದ ದುರ್ಗಪ್ಪ ಪೂಜಾರ, ಬಸವರಾಜ್ ಬೆಣಕಲ್, ದಾವಲಸಾಬ ನದಾಫ, ಸಂಗಮೇಶ ಗೂರಪ್ಪನವರ, ಮಂಜುನಾಥ ಉಪ್ಪಾರ, ರಾಜೇಶ್ವರಿ ಬಿಲಾನಾ, ಬಾಳಮ್ಮ ಜಂಗನವರ, ಭಾರತಿ ಬದ್ದಿ, ಚೇತನಾ ಲಿಂಗದಾಳ.\, ಸಂಗೀತಾ ಪೂಜಾರ, ಶಾಂತಾ ಇರಕಲ್, ಜ್ಯೋತಿ ವಾಲಿಕಾರ, ನಿರ್ಮಲಾ ಮಾನೆ, ಗಫಾರ ಮನಿಯಾರ, ಲತೀಫ ಶರಬತವಾಲಾ, ಬಾಬಾಜಾನ್ ಕಾರಡಗಿ, ವೀರಣ್ಣ ನೀರಲಗಿ, ಇಮ್ರಾನ್ ಸಿದ್ದಿಕಿ, ನದಿಂ ಅಚಮಟ್ಟಿ, ಶೇಕಪ್ಪ ರುದ್ರಾಕ್ಷಿ,ಮಂಜೂರ ಅಥಣಿ, ನೂರುದ್ದೀನ ಗುಬ್ಬಿ, ಜಾವೀದ ಬೇಪಾರಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.