ಕಾಂಗ್ರೆಸ್ ಕಚೇರಿ: ದಿ.ಜವಾಹರಲಾಲ್ ನೆಹರು ಜನ್ಮದಿನ ಆಚರಣೆ

ರಾಯಚೂರು,ನ.೧೪- ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರುರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಪಾರಸಮಲ್ ಸುಖಾಣಿ, ಎ.ವಸಂತಕುಮಾರ, ಜಿ.ಬಸವರಾಜರೆಡ್ಡಿ, ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ, ಜಿ.ಶಿವಮೂರ್ತಿ, ಅಬ್ದುಲ್ ಕರೀಂ, ಭೀಮನಗೌಡ ನಾಗಡದಿನ್ನಿ, ಈರಣ್ಣ, ಸುಧಾಮ, ಜಿ.ಸುರೇಶ, ಪಾಗುಂಟಪ್ಪ ಮಿರ್ಜಾಪುರ, ಬಸವರಾಜ ಪಾಟೀಲ್ ಅತ್ತನೂರು, ಶಂಕರ ಕಲ್ಲೂರು, ನವನೀತ ಆದೋನಿ, ಮಾಲಾ ಭಾಜಂತ್ರಿ, ಹನುಮಂತು ನಾಯಕ, ನಲ್ಲಾರೆಡ್ಡಿ ನಾಯಕ, ನಾಗರಾಜ ರಾಮಸ್ವಾಮಿ, ಲಕ್ಷ್ಮಣ ಮ್ಯಾದಾರ, ವಿ.ಎಸ್.ಯಲ್ಲಪ್ಪ, ತಿಮ್ಮಪ್ಪಸ್ವಾಮಿ, ಬಸವರಾಜ ಬೊಮ್ಮನಾಳ, ಅನ್ವರ್, ಸೂರಿ, ಶಂಶು, ಸಿದ್ಧಪ್ಪ ಮನ್ಸಲಾಪೂರ, ಮೋಹನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.