ಕಾಂಗ್ರೆಸ್ ಕಚೇರಿ ಉದ್ಘಾಟನೆ

ಕೆ.ಆರ್. ಪುರ.ಏ.೧೦- ಮಹದೇವಪುರ ಕ್ಷೇತ್ರದ ಬೆಳತ್ತೂರಿನಲ್ಲಿ ನೂತನ ಕಾಂಗ್ರೆಸ್ ಕಚೇರಿಯನ್ನು ಶಾಸಕ ಎಚ್.ನಾಗೇಶ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ನಾಗೇಶ್ ಅವರು ಸಾರ್ವಜನಿಕರ ಅಹವಾಲು,ಸಮಸ್ಯೆಗಳನ್ನು ಪರಿಹರಿಸಲು ಪಕ್ಷದ ಕಚೇರಿ ಸೇತುವೆಯ ರೀತಿಯಲ್ಲಿ ಇರಲಿದೆ ಎಂದು ತಿಳಿಸಿದರು.
ಐಟಿಬಿಟಿ ಕೇಂದ್ರ ವಾದ ಮಹದೇವಪುರ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು,ನಿವಾಸಿಗಳ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುವ ಕಾರ್ಯ ಮಾಡಲಾಗುವುದೆಂದು ನುಡಿದರು.
ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕಚೇರಿಗಳು ಹೆಚ್ಚು ಅವಶ್ಯಕವಾಗಿದ್ದು, ಸಾರ್ವಜನಿಕರ ಸರ್ವತೋಮುಖ ಅಭಿವೃದ್ಧಿಗೆ ಕಚೇರಿ ಉತ್ತಮ ವೇದಿಕೆಯಾಗಲಿದೆ ಎಂದು ನುಡಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು,ಸಾರ್ವಜನಿಕ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್, ಕೆಪಿಸಿಸಿ ಸದಸ್ಯ ಜಯರಾಮರೆಡ್ಡಿ, ಬ್ಲಾಕ್ ಅಧ್ಯಕ್ಷರಾದ ಬಾಬುಗೌಡ,ವಿಟಿಬಿ ಬಾಬು,ನಾಗಪ್ಪ,ಅನೀಲ್,ಮಾಜಿ ಅಧ್ಯಕ್ಷ ಎಂಸಿಬಿ ರಾಜಣ್ಣ,ಇದ್ದರು.
ಸುದ್ದಿಚಿತ್ರ: ಮಹದೇವಪುರ ಕ್ಷೇತ್ರದ ಬೆಳತ್ತೂರಿನಲ್ಲಿ ನೂತನ ಕಾಂಗ್ರೆಸ್ ಕಚೇರಿಯನ್ನು ಶಾಸಕ ಎಚ್.ನಾಗೇಶ್ ಅವರು ಉದ್ಘಾಟಿಸಿದರು.