ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಮಹನೀಯರ ಜಯಂತಿ

ಬಳ್ಳಾರಿ, ಅ.31: ನಗರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ವಿಶ್ವದ ಮಹಾಕಾವ್ಯ ರಾಮಾಯಣದ ಕರ್ತೃ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ, ದೇಶದ ಮೊದಲ ಗೃಹ ಮಂತ್ರಿ, ಐಕ್ಯ ಭಾರತದ ಹರಿಕಾರ, ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾದ ಸರ್ದಾರ್ ವಲ್ಲಭಾಯಿ ಪಟೇಲ್ ರವರ 145 ನೇ ಜನ್ಮದಿನಾಚರಣೆ ಮತ್ತು ದೇಶದ ಮೊದಲ ಮಹಿಳಾ ಪ್ರಧಾನಿಗಳು, ನೆಹರುರವರನ್ನು ಬಿಟ್ಟರೆ ಅತಿಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕರಿಂದಲೇ ದುರ್ಗಾಮಾತೆ ಎಂಬ ಕೀರ್ತಿ ಪಡೆದ ದೇಶದ ಧೀಮಂತ ನಾಯಕಿ ಶ ಇಂದಿರಾಗಾಂಧಿ ರವರ 36 ನೇ ಪುಣ್ಯಸ್ಮರಣೆ ಯನ್ನು ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಅಧ್ಯಕ್ಷರು ಮತ್ತು ಪ್ರಮುಖ ಮುಖಂಡರು ತಮ್ಮ ಭಾಷಣಗಳಲ್ಲಿ ಮಹನೀಯರು ದೇಶಕ್ಕೆ ಮತ್ತು ಪಕ್ಷಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಈ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಕಲ್ಲುಕಂಭ ಪಂಪಾಪತಿ, ಎಲ್. ಮಾರೆಣ್ಣ, ಉಪಾಧ್ಯಕ್ಷರಾದ ಯತೀಂದ್ರ ಗೌಡ, ಎಂ. ಕುಮಾರಮ್ಮ, ಶರ್ಮಸ್ ಸಾಬ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷ‌ಅಸುಂಡಿ ನಾಗರಾಜ ಗೌಡ, ಕಾರ್ಯದರ್ಶಿಗಳಾದ ವೈ.ಶ್ರೀನಿವಾಸ, ಜೈ ಕುಮಾರ್ ನಾಯುಡು, ಅಲಿವೇಲು ಸುರೇಶ್, ನಾಗಭೂಷಣ ಗೌಡ, ಶಮೀಮ್ ಜಕ್ಲಿ, ಸೈಯದ್ ಚಾಂದ್ ಭಾಷ, ಯಾಳ್ಪಿ ಮೇಟಿ ದಿವಾಕರ್ ಗೌಡ, ಬದ್ರುದ್ದಿನ್, ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಂ.ಸೂರ್ಯನಾರಾಯಣ, ಕೆ.ಪಿ.ಅಂಜಿನಿ, ಮಹಾನಗರಪಾಲಿಕೆ ಮಾಜಿ ಸದಸ್ಯರುಗಳಾದ ಪರ್ವಿನ್ ಬಾನು, ಬಿ.ಕೆ.ಕರೆಕೊಡಪ್ಪ, ಐ.ಎನ್.ಟಿ.ಯು.ಸಿ ಪ್ರಧಾನ ಕಾರ್ಯದರ್ಶಿಯಾದ ಕೆ. ತಾಯಪ್ಪ, ಕಾ.ಕಾ.ಸ ಸದಸ್ಯರಾದ ಬಿ.ಎ.ಮಲ್ಲೇಶ್ವರಿ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಲಕ್ಷ್ಮಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್.ಸಾಧಿಕ್, ಕಾಂಗ್ರೆಸ್ ಮುಖಂಡರಾದ ವಿ.ಲ್.ನಾರಯಣ, ನಾಗರಾಜ.ಸಿ, ಸಮೀರ್, ಸಿ.ಅತ್ತಾವುಲ್ಲಾ, ಬಿ.ಎ.ಪದ್ಮಾವತಿ, ನಜ್ಮ, ಸಿ.ಪ್ರೀತಿ, ಜಿ.ಶೇಖಮ್ಮ, ಅನ್ವರ್, ಪಿ.ಯೆರ್ರೆಮ್ಮ, ವಾಣಿ ಬಾಯಿ ವೆಂಕಟೇಶ್, ಉದಯಕುಮಾರ್, ಶಿವಕುಮಾರ್, ಪೆನ್ನಯ್ಯ, ಸುಭಾನ್, ಸಾಯಿ ನಿತಿನ್, ಮಂಜು ಮತ್ತು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.