
ಸೇಡಂ,ಎ,10: ಪಟ್ಟಣದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿಂದು ಸ್ವಾಭಿಮಾನದ ಸಿಂಹ ಸನ್ಮಾನ್ಯ ಶ್ರೀ ದಿ. ವಿಠ್ಠಲ ಹೇರೂರ ಜೀ ಅವರ 70 ನೇ ಜನ್ಮ ದಿನಾಚರಣೆ ಅಂಗವಾಗಿ ಕೋಲಿ ಸಮಾಜದ ಅಧ್ಯಕ್ಷರಾದ ನಾಗೆಂದ್ರಪ್ಪ ಲಿಂಗಂಪಲ್ಲಿ ಅವರ ನೇತ್ರತ್ವದಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಈ ವೇಳೆಯಲ್ಲಿ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವೀಂದ್ರ ನಂದಿಗಾಮ್, ಸತೀಶ್ ಪಾಟೀಲ್ ರಂಜೋಳ್, ಪುರಸಭೆ ಸದಸ್ಯರಾದ ಸಂತೋಷ್ ತಳವಾರ್ ಹಾಗೂ ದೇವಾನಂದ್ ಪಿಲ್ಲಿ ಮಲ್ಲಿಕಾರ್ಜುನ್ ಬಾಂಡ್ಲೇರ್, ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.