ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಜನ್ಮದಿನ

ಬೀದರ್:ನ.15: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಅವರ ಜನ್ಮದಿನ ಆಚರಿಸಲಾಯಿತು.
ಮಾಜಿ ಸಂಸದ ನರಸಿಂಗ್‍ರಾವ್ ಸೂರ್ಯವಂಶಿ ಅವರು, ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೊದಲ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಕುರಿತು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಮುಖಂಡರಾದ ವೆಂಕಟರಾವ್ ಸಿಂಧೆ, ನಿಸಾರ್ ಅಹಮ್ಮದ್, ಸಂಜಯ್ ಜಾಗೀರದಾರ್, ಪರ್ವೇಜ್ ಕಮಲ್, ಸಂಜುಕುಮಾರ ಡಿ.ಕೆ, ಅಬ್ದುಲ್ ಸತ್ತಾರ್, ವಿಶಾಲ್ ದೊಡ್ಡಿ, ಲೋಕೇಶ ಮಂಗಲಗಿ ಇದ್ದರು.