ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಾಬು ಜಗಜೀವನರಾಮ್ ಜಯಂತೋತ್ಸವ ಆಚರಣೆ

ಸೇಡಂ,ಎ,05: ತಾಲೂಕಿನ ಊಡಗಿ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾರತದ ಮಾಜಿ ಉಪ ಪ್ರಧಾನ ಮಂತ್ರಿ,ಸ್ವಾತಂತ್ರ ಹೋರಾಟಗಾರ,ರಾಷ್ಟ್ರ ನಾಯಕ,ನಿರಂತರವಾಗಿ ಶೋಷಿತರ ಮತ್ತು ದುರ್ಬಲರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕರು, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ರವರ 114ನೇ ಜಯಂತೋತ್ಸವ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ತಾಲೂಕಾ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ್ ಅವರು ಭಾವಚಿತ್ರಕ್ಕೆ ಪೂಜೆ, ಮಾಲಾರ್ಪಣೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಿದರು.
ಈ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು , ಪಕ್ಷದ ವಿವಿಧ ಘಟಕಗಳ ಪ್ರಮುಕರು, ಕಾರ್ಯಕರ್ತರು ಉಪಸ್ಥಿತರಿದ್ದರು.