ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಜಯಂತಿ

ಬೀದರ್: ನ.20:ಇಲ್ಲಿಯ ಶಿವನಗರದಲ್ಲಿ ಇರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ವೆಂಕಟರಾವ್ ಶಿಂಧೆ ಮಾತನಾಡಿ, ದೇಶದ ಸರ್ವ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಶ್ರೇಯ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಇಂದಿರಾ ಅವರು 1971 ರಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದ್ದರು. 1972 ರಲ್ಲಿ ಗರೀಬಿ ಹಟಾವೋ ಘೋಷವಾಕ್ಯದೊಂದಿಗೆ ದೇಶದಲ್ಲಿ ಬಡತನ ನಿವಾರಣೆಗೆ ಶ್ರಮಿಸಿದ್ದರು. ದೇಶಕ್ಕೆ ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದ್ದರು ಎಂದು ಸ್ಮರಿಸಿದರು.

ಇಂದಿರಾ ಗಾಂಧಿ ಅವರೊಂದಿಗೆ ಸಂಸದನಾಗಿ ಕೆಲಸ ಮಾಡುವ ಅವಕಾಶ ನನಗೆ ದೊರಕಿತ್ತು. ಅವರು ದೂರದೃಷ್ಟಿಯ ನಾಯಕಿಯಾಗಿದ್ದರು. ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ದೇಶದ ಸಮಗ್ರ ವಿಕಾಸಕ್ಕೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದರು ಎಂದು ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ ತಿಳಿಸಿದರು.

ಪ್ರಧಾನಿ ಹುದ್ದೆಗೆ ಏರಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮಹಿಳೆಯರಿಗೆ ಆದರ್ಶಪ್ರಾಯರೂ ಆಗಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ರಾಜಶೇಖರ ಪಾಟೀಲ ಅಷ್ಟೂರ, ಬಿಡಿಎ ಮಾಜಿ ಅಧ್ಯಕ್ಷ ಮುರಳೀಧರರಾವ್ ಎಕಲಾರಕರ್, ಮುಖಂಡರಾದ ಶಂಕರರಾವ್ ದೊಡ್ಡಿ, ರೋಹಿದಾಸ್ ಘೋಡೆ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಫರೀದ್ ಖಾನ್, ಸೇವಾ ದಳದ ಅಧ್ಯಕ್ಷ ಅಬ್ದುಲ್ ಸತ್ತಾರ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಡಿ.ಕೆ, ಪರ್ವೇಜ್ ಕಮಲ್, ಅಫ್ಜರ್ ಖಾನ್, ಜಾನ್ ವೆಸ್ಲಿ, ಶರಣಪ್ಪ ಶರ್ಮಾ, ಶಂಕರ ರೆಡ್ಡಿ ಚಿಟ್ಟಾ, ಸುನೀಲ್ ಬಚ್ಚನ್, ರಾಜಕುಮಾರ ಹಲಬುರ್ಗೆ ಇದ್ದರು.