ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಜಯಂತಿ‌


(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ,19- ನಗರದ ಜಿಲ್ಲಾ  ಕಾಂಗ್ರೆಸ್ ಕಚೇರಿಯಲ್ಲಿ ನಗರ ಕಾಂಗ್ರೆಸ್ ಸಮಿತಿಯಿಂದ  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 105 ನೇ ವರ್ಷದ ಜನ್ಮದಿನೋತ್ಸವದ ಆಚರಣೆಯನ್ನು ಇಂದು  ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಕಲ್ಲುಕಂಬ ಪಂಪಾಪತಿ,  ಎಲ್.ಮಾರೆಣ್ಣ,  ಮೊಹಮ್ಮದ್ ಗೌಸ್, ರಾಮ ರಾಜು,  ಉಪಾಧ್ಯಕ್ಷೆ ಎಂ.ಕುಮಾರಮ್ಮ,   ಎಸ್.ಸಿ ವಿಭಾಗ ಅಧ್ಯಕ್ಷ ಯರಕುಲ ಸ್ವಾಮಿ, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಅಲಿವೇಲು ಸುರೇಶ್ ಮೊದಲಾದವರು ಇದ್ದರು.