ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಚಾಮರಾಜನಗರ, ಡಿ.07:- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ವರ್ಷದ ಪರಿನಿರ್ವಾಣ ದಿನಾಚರಣೆಯನ್ನು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ ಮಾಡಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೊಂಬತ್ತಿಯನ್ನು ಹಚ್ಚಿ ಬಾಬಾಸಾಹೇಬರಿಗೆ ಗೌರವ ನಮನ ಸಲ್ಲಿಸಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮೊಂಬತ್ತಿ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶೋಷಿತ ಸಮಾಜಗಳಿಗೆ ಸಂವಿಧಾನ ಬದ್ದವಾಗಿ ನ್ಯಾಯ ಕಲ್ಪಿಸಿಕೊಟ್ಟÀ ಧೀಮಂತ ನಾಯಕ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅಪಾರವಾದ ಪಾಂಡಿತ್ಯವನ್ನು ಪಡೆದುಕೊಳ್ಳುವ ಜೊತೆಗೆ ನನ್ನ ಸಮುದಾಯ ಮತ್ತು ಜನಕ್ಕೆ ಒಳ್ಳೆಯದನ್ನು ಮಾಡಬೇಕು. ಅವರು ನನ್ನಂತೆ ಕಷ್ಟವನ್ನು ಎಂದಿಗೂ ಅನುಭವಿಸಬಾರದು ಎಂಬ ಉದ್ದೇಶದಿಂದ ಸಂವಿಧಾನ ರಚನೆ ಕರಡು ಸಮಿತಿಯ ಅಧ್ಯಕ್ಷರಾಗಿ ದೇಶದ ಅಭಿವೃದ್ದಿಗೆ ಪೂರಕವಾದ ಸಂವಿಧಾನವನ್ನು ನೀಡುವ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಬಣ್ಣಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್ ಮಾತನಾಡಿ, ಡಾ. ಬಿ.ಆರ್. ಆಂಬೇಡ್ಕರ್ ಅವರು ಕೇವಲ 2 ವರ್ಷಗಳ ಅವಧಿಯಲ್ಲಿ ಪರಿಪಕ್ವವಾದ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಪ್ಪುವಂತೆ ಸಂವಿಧಾನ ನೀಡಿದ ಮಹಾಪುರುಷ, 8 ಸಾವಿರ ಪುಟಗಳನ್ನು ಹೊಂದಿರುವ 14 ಸಂಪುಟಗಳ ದೊಡ್ಡ ಗಾತ್ರ ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿದರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಆಸ್ಗರ್, ಗುರುಸ್ವಾಮಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಶ್ವನಾಯಕರು. ಪ್ರಪಂಚವೇ ಮೆಚ್ಚುವಂತಹ ಸಂವಿಧಾನ ನೀಡುವ ಮುಲಕ ದೇಶದ ಅಭಿವೃದ್ದಿ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಜಾತ್ಯತೀತ ಭಾರತಕ್ಕೆ ಒಪ್ಪುವಂತಹ ಸಂವಿಧಾನವನ್ನು ನೀಡಿ, ಸರ್ವ ಜಾತಿ, ಧರ್ಮಗಳನ್ನು ಜೊತೆಜೊತೆಯಾಗಿ ಕೊಂಡ್ಯೋಯುವ ಕಾರ್ಯಸೂಚಿಯನ್ನು ನೀಡಿದರು. ಅವರ ಪರಿನಿರ್ವಾಣ ದಿನವನ್ನು ಅಚರಣೆ ಮಾಡುವ ಜೊತೆಗೆ ಅವರ ಸೇವೆ, ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಜಿ.ಪಂ. ಮಾಜಿ ಸದಸ್ಯರಾದ ಸಿ.ಎ. ಮಹದೇವಶೆಟ್ಟಿ, ರಮೇಶ್, ಮುಖಂಡರಾದ ಪು. ಶ್ರೀನಿವಾಸನಾಯಕ, ಸುಹೇಲ್ ಆಲಿ ಖಾನ್, ಆಯುಬ್ ಖಾನ್, ಎಎಚ್‍ಎನ್ ಖಾನ್, ತಾ.ಪಂ. ಮಾಜಿ ಸದಸ್ಯ ಕಾಗಲವಾಡಿ ಶಿವಸ್ವಾಮಿ, ಮುಖಂಡರಾದ ಕಾಗಲವಾಡಿ ಚಂದ್ರು, ಸಿ.ಕೆ. ರವಿಕುಮಾರ್, ನಾಗವಳ್ಳಿ ನಾಗಯ್ಯ, ಕಾನೂನು ವಿಭಾಗದ ಅಧ್ಯಕ್ಷ ನಾಗಾರ್ಜುನ ಪ್ರಥ್ವಿ, ಸಾಮಾಜಿಕ ಜಾಲತಾನದ ತಾ. ಅಧ್ಯಕ್ಷ ಬ್ಯಾಡಮೂಡ್ಲು ಮರಿಸ್ವಾಮಿ, ಗ್ರಾಪಂ. ಸದಸ್ಯ ಹೆಬ್ಬಸೂರು ಮಧು ಮೊದಲಾದವರು ಇದ್ದರು.