ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ

ಕೋಲಾರ,ಡಿ.೭: ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಶೋಷಿತ ವರ್ಗಗಳ ಬದುಕಿಗೆ ಆಸರೆಯಾಗಿದ್ದು, ಅಸಮಾನತೆ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಇಡೀ ವಿಶ್ವದಲ್ಲೇ ನಮ್ಮದು ಶ್ರೇಷ್ಟವಾದ ಸಂವಿಧಾನವಾಗಿದ್ದು, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಸಂವಿಧಾನ ರಚಿಸಿ ಜನಮಾನಸದಲ್ಲಿ ಅಂಬೇಡ್ಕರ್ ವಿರಾಜಮಾನರಾಗಿದ್ದಾರೆ ಎಂದರು.
ಅವರ ಆದರ್ಶ ಪಾಲಿಸೋಣ, ಅವರ ಹಾದಿಯಲ್ಲಿ ಸಾಗುವ ಮೂಲಕ ಸಮಾಜದಲ್ಲಿನ ಅಸಮಾನತೆ ತೊಡೆದುಹಾಕಲು ಸಂಕಲ್ಪ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು,ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ,ಪ್ರಧಾನ ಕಾರ್ಯದರ್ಶಿ ರೂಪ, ಡಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟಪತಿ,ಎಸ್ಸಿಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದ್ರಿಪುರ ಬಾಬು, ರಾಮಯ್ಯ,ಕಾರ್ಗಿಲ್‌ವೆಂಕಟೇಶ್,ವಿ.ಮಾರಪ್ಪ,ಮಹಿಳಾ ಘಟಕದ ನಿರ್ಮಲಾ, ಕಿಸಾನ್‌ಖೇತ್ ನಾಗರಾಜ್, ಲಾಲ್‌ಬಹುದ್ದೂರು ಶಾಸ್ತ್ರಿ,ಮುಖಂಡರಾದ ಕೆಇಬಿ ಚಂದ್ರು,ಜಗನ್ನಾಥ್,ಬಾಬು,ಮಹಮದ್ ಫ್ಯಾರೆಜಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಗೌಡ, ಲತೀಫ್ ಮತ್ತಿತರರಿದ್ದರು.