ಕಾಂಗ್ರೆಸ್ ಕಚೇರಿಯಲ್ಲಿರಾಜೀವ್ ಅರಸು ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.20: ನಗರದಲ್ಲಿನ  ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು  ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ, ದೇಶದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ  ದಿ. ಡಿ.ದೇವರಾಜ್ ಅರಸು ಅವರ ಜನ್ಮದಿನವನ್ನು  ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ  ಅಧ್ಯಕ್ಷ ರಫಿ ಅಚರು  ರಾಜೀವ್ ಗಾಂದಿ ಅವರು ಅತ್ಯಂತ ಯುವ ಪ್ರಧಾನಿಯಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ, ಯುವಕರಿಗೆ ಮತದಾನ ಚಲಾಯಿಸುವ ವಯೋಮಿತಿಯನ್ನು 18 ಕ್ಕೆ ಇಳಿಸಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ತೆಗೆದುಕೊಂಡ ದಿಟ್ಟ ನಿಲುವುಗಳನ್ನು ಸ್ಮರಿಸಿದರು. ನಂತರ ದೇವರಾಜ್ ಅರಸು ಅವರು ನಮ್ಮ ರಾಜ್ಯದ ದೀರ್ಘಾವಧಿಯ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ನಾಡಿನ ಏಳಿಗೆಗಾಗಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದ ಮಹಾನ್ ನಾಯಕ, ಹಿಂದುಳಿದ ವರ್ಗಗಳ ಅಭವೃದ್ಧಿಗೆ ನಿರಂತರವಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದ ಕುರಿತು ಶ್ಲಾಘಿಸಿದರು.
ಕಳೆದ  ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ನಿಷ್ಠಾವಂತರಿಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ  ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರಿಗೆ,  ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದಿಂದ ಸನ್ಮಾನಿಸಿ ಗೌರವಿಸಲಾಯ್ತು.
ಈ ಸಂಧರ್ಭದಲ್ಲಿ ಕೆಪಿಸಿಸಿ ಪ್ರಚಾರ ಕಾಂಗ್ರೆಸ್ ಸಮಿತಿಯ  ಸಂಯೋಜಕರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾಂತ್, ಕೆಪಿಸಿಸಿ ಪ್ರಚಾರ ಕಾಂಗ್ರೆಸ್ ಸಮಿತಿಯ ಜಂಟಿ ಸಂಯೋಜಕ ವೆಂಕಟೇಶ್ ಹೆಗಡೆ,   ಎಸ್.ಸಿ ಘಟಕದ ಅಧ್ಯಕ್ಷ ಎನ್.ವಿ.ಯರಕುಲಸ್ವಾಮಿ, ಕಿಸಾನ್ ಘಟಕದ ಅಧ್ಯಕ್ಷ  ಮನ್ಯಂ ಶ್ರೀಧರ್, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಅಲಿವೇಲು ಸುರೇಶ್ ಮೊದಲಾದವರು ಇದ್ದರು.