ಕಾಂಗ್ರೆಸ್ ಐತಿಹಾಸಿಕ ಗೆಲುವಿಗೆ ಮತನೀಡಿದ ಮತದಾರರು

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೫; ಲೋಕಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.  ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ಡಿ. ಬಸವರಾಜ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ರವರ ಪರವಾಗಿ ದಾವಣಗೆರೆಗೆ ಬಂದು ಪ್ರಚಾರ ಮಾಡಿದ ಕಾಂಗ್ರೆಸ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕ ಗಾಂಧಿ, ಎಐಸಿಸಿ ಜನರಲ್ ಸೆಕ್ರೆಟರಿ ರಣದೀಪ್ ಸಿಂಗ್ ಸುರ್ಜವಾಲ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಡಾಕ್ಟರ್ ಜಿ. ಪರಮೇಶ್ವರ್, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಎಐಸಿಸಿ ಜನರಲ್ ಸೆಕ್ರೆಟರಿ ಮಯೂರ್ ಜಯಕುಮಾರ ಹೆಚ್ ಎಂ ರೇವಣ್ಣ, ಹೆಚ್ ಆಂಜನೇಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆಪ್ರಧಾನಿ ಮೋದಿಯೇ ಮತ ಎಣಿಕೆಯ ಹಲವಾರು ಸುತ್ತುಗಳಲ್ಲಿ ಹಿನ್ನಡೆ ಕಂಡಿದ್ದು ದೇಶದಲ್ಲಿ ಮೋದಿ ಅಲೆ ಇರಲಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ಇನ್ನೂ ರಾಹುಲ್ ಗಾಂಧಿಯವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಜಯಬೇರಿ ಭಾರಿಸಿರುವುದನ್ನು ನೋಡಿದರೆ ದೇಶದ ಜನರು ಬದಲಾವಣೆ ಬಯಸಿರುವುದು ನಿಶ್ಚಿತ ವಾಗಿ ಕಂಡುಬರುತ್ತಿದೆ.ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯವರು ಮೋದಿಗಿಂತ ಹೆಚ್ಚಿನ ಮತಗಳನ್ನ ಪಡೆದಿದ್ದಾರೆ ಮೋದಿ ಕೇವಲ 152513ಮತಗಳ ಅಂತರದಿAದ ಗೆದ್ದಿದ್ದು, ರಾಹುಲ್ ಗಾಂಧಿ ಯವರು ಉತ್ತರ ಪ್ರದೇಶ ದ ರಾಯ್ ಬರೇಲಿಯಲ್ಲಿ 3 ಲಕ್ಷಕ್ಕೂ ಆಧಿಕ ಮತ ಗಳಿಂದ ಹಾಗೂ ಕೇರಳದ ವೈನಾಡು ನಲ್ಲಿ 2 ಲಕ್ಷಕ್ಕೂ ಆಧಿಕ ಮತಗಳಿಂದ ಗೆಲ್ಲುವ ಮೂಲಕ ಮೋದಿ ಗಿಂತ ರಾಹುಲ್ ಗಾಂಧಿ ಯವರು ಜನಪ್ರಿಯ ನಾಯಕ ಎಂಬುದನ್ನು ಮತದಾರರು ರುಜುವತು ಪಡಿಸಿದ್ದಾರೆಂದು ಡಿ. ಬಸವರಾಜ್ ತಿಳಿಸಿದ್ದಾರೆ. ದೇಶದ ಹಲವು ಸುದ್ದಿ ಮತ್ತು ಇತರೆ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 400 ಕ್ಕೂ ಹೆಚ್ಚು ಸ್ಥಾನ ಬರಲಿದೆ. I.ಓ.ಆ.I.ಂ.ಗೆ 100 ರಿಂದ 120 ಸ್ಥಾನಗಳಷ್ಟೇ ದೊರೆಯಲಿವೆ ಎಂದು ಹೇಳಿದ್ದವು. ಆದರೆ, ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ.