
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.10 :- ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲೆಯ ಎಸ್ಸಿ ಘಟಕದ ಮಹಿಳಾ ಜಿಲ್ಲಾಧ್ಯಕ್ಷರಾಗಿ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷೆ ಎಂ ವಿಶಾಲಾಕ್ಷಿರವರನ್ನು ಭಾನುವಾರ ನೇಮಕ ಮಾಡಿ ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೇಸ್ ಎಸ್ಸಿ ವಿಭಾಗದ ಅಧ್ಯಕ್ಷ ಹೆಚ್ ಹುಲುಗಪ್ಪ ಆದೇಶ ಪ್ರತಿಯನ್ನು ನೀಡಿದ್ದಾರೆ.
ಬಹುಜನ ಸಮಾಜ ಪಾರ್ಟಿ, ಜೆಡಿಎಸ್ ಪಕ್ಷ ಪಕ್ಷದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ರಾಜಕೀಯ ಅನುಭವವಿರುವ ಎಂ ವಿಶಾಲಾಕ್ಷಿಯವರು ಕೂಡ್ಲಿಗಿ ತಾಲೂಕು ಪಂಚಾಯ್ತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು ಇವರ ರಾಜಕೀಯ ಸೇವಾ ಕಾರ್ಯ ಅನುಭವ ಗುರುತಿಸಿ ಕೂಡ್ಲಿಗಿ ಕ್ಷೇತ್ರ ಸೇರಿದಂತೆ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪಕ್ಷದ ತತ್ವ ಸಿದ್ಧಾಂತದಡಿ ಸಂಘಟನೆ ಹೆಚ್ಚಿಸಿ ಏಳ್ಗೆಗೆ ಶ್ರಮಿಸುವಂತೆ ಕಾಂಗ್ರೇಸ್ ಎಸ್ಸಿ ವಿಭಾಗದ ರಾಜ್ಯಾಧ್ಯಕ್ಷರಾದ ಆರ್ ಧರ್ಮಸೇನ ಅವರ ಅನುಮೋದನೆ ಮೇರೆಗೆ ಎಂ ವಿಶಾಲಾಕ್ಷಿ ಇವರನ್ನು ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲೆಯ ಎಸ್ಸಿ ಘಟಕದ ಮಹಿಳಾ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ನೀಡಲಾಗಿದೆ ಎಂದು ಹೆಚ್ ಹುಲುಗಪ್ಪ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ. ಈ ಆದೇಶ ಪ್ರತಿ ನೀಡುವ ಸಂದರ್ಭದಲ್ಲಿ ಎಸ್ಸಿ ಘಟಕದ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಡಿ.ಹೆಚ್ ದುರುಗೇಶ ವಕೀಲರು, ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ವೀರಯ್ಯಸ್ವಾಮಿ, ಹೊಸಪೇಟೆ ಕೃಷ್ಣಪ್ಪ, ಸೂಲದಹಳ್ಳಿ ವೆಂಕಟೇಶ, ಕುರುಬನಹಳ್ಳಿ ರಮೇಶ ಹಾಗೂ ಇತರರಿದ್ದರು.