
ಕವಿತಾಳ,ಮೇ.೦೫- ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ನಾಯಕರು ಕವಿತಾಳದಲ್ಲಿ ಭರ್ಜರಿ ಮತಯಾಚನೆ ಮಾಡಿದರು ಅವರು ಮರೆತು ಗುಡ್ಡದ ಕ್ರಾಸ್‌ನಿಂದ ಅನ್ವರಿ ಕ್ರಾಸ್ ಮುಕಾಂತರ ಅಂಬೇಡ್ಕರ್ ಸರ್ಕಲ್‌ದಲ್ಲಿ ಮಾಲಾರ್ಪಣೆ ಮಾಡುವುದರ ಮೂಲಕ ಹಾಜರತ್ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಜಿ.ಹಂಪಯ್ಯ ನಾಯಕರು ಹಾಗೂ ಎಮ್ ಈರಣ್ಣನವರು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮತದಾರರಲ್ಲಿ ಮತಯಾಚನೆ ಮಾಡಿದರು ಅವರು ಶಿವಪ್ಪ ಮಠದ ಹತ್ತಿರ ಜಿ ಹಂಪಯ್ಯನಾಯಕ ಮಾತನಾಡಿ ನಾನು ಶಾಸಕನಾಗಿ ಇದ್ದ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಅಲ್ಲದೆ ಶಾಲಾ ಕಾಲೇಜುಗಳು ಚರಂಡಿ ರಸ್ತೆ ನಿರ್ಮಿಸಿ ತಮ್ಮ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಈ ಬಾರಿ ನನ್ನನ್ನು ಆರಿಸಿ ತಂದು ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಶೀರ್ವದಿಸಬೇಕೆಂದು ಮತದಾರರಲ್ಲಿ ಮತಯಾಚನೆ ಮಾಡಿ ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮಂಜುಳಾ ಅಂಬರೀಶ್ ಕಿರಲಿಂಗಪ್ಪ ಲೇಖಕತಳ್ಳಿ ಮಾಳಪ್ಪ ಶೇಕ್ರಪ್ಪ ಸೌಕಾರ್ ವೆಂಕಟರಾವ್ ದಣಿ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಇದ್ದರು.