ಕಾಂಗ್ರೆಸ್ ಅಭ್ಯರ್ಥಿ ಸಹೋದರ ಪೊಲೀಸ್ ವಶಕ್ಕೆ

ಮತ ಎಣಿಕೆ ಕೇಂದ್ರ :ಅನವಶ್ಯಕವಾಗಿ ಓಡಾಟ
ರಾಯಚೂರು.ಮೇ.೨-ಮಸ್ಕಿ ಉಪಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಟ ಮಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಸಹೋದರ ಸಿದ್ದನಗೌಡ ತುರ್ವಿಹಾಳ ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ನಡೆಯಿತು.
ಹೈ ವೋಲ್ಟೇಜ್ ಮಸ್ಕಿ ಉಪಚುನಾವಣೆಯ ಮತ ಎಣಿಕೆಯು ಇಂದು ಬೆಳಿಗ್ಗೆ ೮ ಗಂಟೆಯಿಂದ ಪ್ರಾರಂಭವಾಗಿದ್ದು ಮತ ಎಣಿಕೆ ಸಂದರ್ಭದಲ್ಲಿ ಅನಾವಶ್ಯಕವಾಗ ಕಾಂಗ್ರೆಸ್ ಅಭ್ಯರ್ಥಿ ಸಹೋದರ ಸಿದ್ದನಗೌಡ ತುರ್ವಿಹಾಳ ಮತ ಕೇಂದ್ರದ ಮುಂದೆ ತಿರುಗಾಡುತ್ತಿದು ಸದರ ಬಜಾರ್ ಪೊಲೀಸ್ ಠಾಣೆಯ ಪಿಐ ಮಲ್ಲಮ್ಮ ಚೌದೆ ಅವರ ಹತ್ತಿರ ಮಾತಿನ ಚಕಮಕಿ ನಡೆದಿದ್ದು ವಿಷಯ ತಿಳಿದ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ ಗರಂ ಗೊಂಡು ಸಿದ್ದನಗೌಡ ತುರವಿಹಾಳ ಅವರನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಸೂಚಿಸಿದರು.