ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ ಪರ ಮತಯಾಚಿಸಿದ ಡಿ.ಜಿ.ಸಾಗರ್


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 06 : ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿಗೆ ಮತ ನೀಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಅವರು ತಮ್ಮ‌ಸಂಘಟನೆಯ ಮುಖಂಡರೊಂದಿಗೆ ನಗರದ 35 ನೇ ವಾರ್ಡಿನಲ್ಲಿ ಇಂದು ಮತಯಾಚನೆ ಮಾಡಿದರು.
ವಾರ್ಡಿನ ಪಾಲಿಕೆ ಸದಸ್ಯ ಶ್ರೀನಿವಾಸ್ ಮಿಂಚು, ಸಂಘಟನೆಯ ರಾಜ್ಯ ಸಂಚಾಲಕ ಎ.ಮಾನಯ್ಯ, ಜಿಲ್ಲಾ ಸಂಚಾಲಕ ಹೆಚ್.ಸಿದ್ದೇಶ್ ಮೊದಲಾದವರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ನಿಂದ ಮಾತ್ರ ಸರ್ವ ಸಮುದಾಯಗಳಿಗೆ ನ್ಯಾಯ ದೊರಕಲಿದೆ. ಈ ನಿಟ್ಟಿನಲ್ಲಿ ಯುವಕ ಭರತ್ ರೆಡ್ಡಿ ಇಗಾಗಲೇ ತಮ್ಮ‌ಸ್ವಯಂ ಸೇವಾ ಸಂಸ್ಥೆಯಿಂದ ಜನಪರ ಕೆಲಸಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್ ಗೆ ಮತ‌ನೀಡಿ ಎಂದರು