ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆ ದಾವಣಗೆರೆ ಜಿಲ್ಲಾ ಭೋವಿ ಸಮಾಜದ ಬೆಂಬಲ

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.17: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ದಾವಣಗೆರೆ ಜಿಲ್ಲಾ ಭೋವಿ ಸಮಾಜ  ನೂರಾರು ಸಂಖ್ಯೆಯಲ್ಲಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ನಿವಾಸಕ್ಕೆ ಆಗಮಿಸಿದರು.ಸಮಾಜದವರನ್ನುದ್ದೇಶಿಸಿ ಮಾತನಾಡಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮಾತನಾಡಿ ಭೋವಿ ಸಮಾಜದವರು ಪ್ರತಿ ಚುನಾವಣೆಯಲ್ಲೂ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ಅವಕಾಶ ಇದ್ದ ಕಡೆ ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ ಕಾಂಗ್ರೆಸ್ ಪಕ್ಷ ಸದಾ ಶೋಷಿತ ಸಮುದಾಯದ ಜೊತೆ ಇದ್ದು, ಕಾಂಗ್ರೆಸ್ ಪಕ್ಷದಿಂದ ಇಂದು ಭೋವಿ ಸಮಾಜದವರಿಗೆ ಹೊಲಗಳು, ಮನೆಯಂತಹ ಆಸ್ತಿ ಜೊತೆಗೆ ಇದೀಗ ಪಂಚ ಗ್ಯಾರಂಟಿ ಸಹ ನೀಡಲಾಗುತ್ತಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜಯಣ್ಣ ಮಾತನಾಡಿ ಭೋವಿ ಸಮಾಜದವರು ಪ್ರತಿ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಸಮಾಜದ ಕೆಲಸಗಳಿಗೆ ಸದಾ ಸ್ಪಂದಿಸಿದ್ದಾರೆ ಎಂದರು.ಚನ್ನಗಿರಿಯ ಹನುಮಂತಪ್ಪ, ರಾಜಪ್ಪ, ಜಗಳೂರಿನ ಅಂಜಿನಪ್ಪ, ಹೊನ್ನಾಳಿಯ ಮಂಜಪ್ಪ ಕತ್ತಿಗಿ, ಬೆಂಕಿಕೆರೆ ಹನುಂತಪ್ಪ, ಅಂಜಿನಪ್ಪ, ಪುಟ್ಟಣ್ಣ, ಚಿರಡೋಣಿ ಮಂಜಪ್ಪ ಮತ್ತಿತರರು ಮಾತನಾಡಿ ಕಾಂಗ್ರೆಸ್ ಬಡವರ ಪಕ್ಷ. ಭೋವಿ ಸಮಾಜದವರು ಸಹ ಅತಿ ಹೆಚ್ಚು ಬಡತನ ಹೊಂದಿರುವ ಜನಾಂಗ. ಈ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಉಳುವವನೇ ಭೂಮಿ ಒಡೆಯ, ಇರುವವನೇ ಮನೆಯೊಡೆಯ ಸೇರಿದಂತೆ ಈಗ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ಪೂರಕವಾಗಿವೆ ಎಂದರು.