ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ವಿಶ್ವಾಸ ಕೊಂಡಯ್ಯ, ಅಲ್ಲಂ

ಬಳ್ಳಾರಿ, ಅ.28: ಕಳೆದ ಬಾರಿಯಂತೆ ಈ ಬಾರಿಯೂ ಮತದಾರರು ಅಭ್ಯರ್ಥಿಯ ಸೇವೆಯನ್ನು ಪರಿಗಣಿಸಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು ಗೆಲ್ಲಿಸಲಿದ್ದಾರೆಂದು ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ ಮತ್ತು ಅಲ್ಲಂ ವೀರಭದ್ರಪ್ಪ ಅವರು ಹೇಳಿದ್ದಾರೆ.
ನಗರದ ತಾಲೂಕು ಕಛೇರಿ ಬಳಿಯ ಮತದಾನ ಕೇಂದ್ರದ ಮುಂದೆ ಪಕ್ಷದ ಮುಖಂಡರುಗಳಾದ ಕಲ್ಕಂಬ ಪಂಪಾಪತಿ, ಮಾಜಿ ವಿಧಾನ ಪರಿಷತ್ ಸದಸ್ಯ ನಿರಂಜನ ನಾಯ್ಡು, ಗೋನಾಳ್ ವಿರೂಪಾಕ್ಷಗೌಡ, ಶರ್ಮಾಸಾಬ್, ಜಿ.ನೀಲಕಂಠಪ್ಪ, ಘನ ಮಲ್ಲನಗೌಡ, ಬಿ.ಕೆ.ಕೆರೆಕೋಡಪ್ಪ, ಜಾನೆಕುಂಟೆ ಸಣ್ಣ ಬಸವರಾಜ್, ಚಂದ್ರಾಯಿ ದೊಡ್ಡಬಸಪ್ಪ, ಮೇಟಿ, ಯಾಳ್ಪಿ ಪೊಂಪನಗೌಡ, ಮೊದಲಾದವರೊಂದಿಗೆ ಮತಯಾಚಿಸಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ನಮ್ಮ ಅಭ್ಯರ್ಥಿ ಮಟ್ಟೂರು ಅವರು ವಿಜಯ ಸಾಧಿಸಿದ್ದರು. ಆಯ್ಕೆಯಾದ ನಂತರ ಅವರ ಶಿಕ್ಷಕರು, ಉಪನ್ಯಾಸಕರಿಗೆ ವಯಕ್ತಿಕವಾಗಿ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಸರ್ಕಾರದಲ್ಲಿ ಅವರಿಗೆ ದೊರಕಬೇಕಾದ ಸೌಲಭ್ಯಗಳಿಗೆ ಹೋರಾಟ ಮಾಡಿದ್ದಾರೆ. ಅದನ್ನು ಪರಿಗಣಿಸಿ ಮತ್ತು ಪಕ್ಷದ ಜಿಲ್ಲೆಯ ಎಲ್ಲ ಮುಖಂಡರು, ಕಾರ್ಯಕರ್ತರು ಪ್ರತಿ ಮತದಾರರಿಗೆ ಅಭ್ಯರ್ಥಿಯ ಸೇವಾ ಮನೋಭಾವ ತಿಳಿಸಿ ಮತ ನೀಡುವಂತೆ ಕೋರಿದ್ದು ಮಟ್ಟೂರು ಅವರು ಮತ್ತೊಮ್ಮೆ ಆಯ್ಕೆಯಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.