ಕಾಂಗ್ರೆಸ್ ಅಭ್ಯರ್ಥಿ ಕೊನೆ ಕ್ಷಣದ ಬಹಿರಂಗ ಪ್ರಚಾರ

ಸಂಜೆವಾಣಿ ನ್ಯೂಸ್
ಮೈಸೂರು:ಏ.25:- ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ ನಗರದ ಹಲೆವೆಡೆ ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ ಧ್ರುವನಾರಾಯಣ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ರವರ ಜೊತೆಗೂಡಿ ಬಿರುಸಿನ ಮತ ಪ್ರಚಾರ ನಡೆಸಿದರು.
ಅಶೋಕಪುರಂನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮತಯಾಚನೆ ಶುರು ಮಾಡಿದ ಲಕ್ಷ್ಮಣ್ ಅವರಿಗೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೆಂಬಲ ನೀಡಿದರು.
ನಂತರ ಕೆ.ಜಿ ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಶ್ರೀ ಸಿದ್ದಪ್ಪಾಜಿ ಮತ್ತು ಗಣಪತಿ ಹಾಗೂ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಕನ್ನೇಗೌಡನ ಕೊಪ್ಪಲಿನ್ನೆಲೆಡೆ ಪ್ರತಿ ಅಂಗಡಿ ವ್ಯಾಪಾರಸ್ಥರಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ಕೋರಿದರು.
ತಿಲಕ್ ನಗರ, ಶನೇಶ್ವರ ದೇವಸ್ಥಾನದಲ್ಲಿ ರೋಡ್ ಶೋ ನಡೆಸಿ, ಕುರುಬರಹಳ್ಳಿಯ ಶ್ರೀ ಆಯರಹಳ್ಳಿ ಮಾಕಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಇದೇ ವೇಳೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರು ಅಯೂಬ್ ಖಾನ್ ಇನ್ನಿತರರು ಭಾಗಿಯಾಗಿದ್ದರು.