ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಅಧಿಕ ಮತ ನೀಡಿ ಗೆಲ್ಲಿಸಿ:   ಬಿ.ದೇವೇಂದ್ರಪ್ಪ

ಜಗಳೂರು.ಏ.೨೧ :- ಕಾಂಗ್ರೇಸ್ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಿದ್ದು ಅಧಿಕ ಮತಗಳಿಂದ ಗೆಲ್ಲಿಸುವಂತೆ ಜಗಳೂರು ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಬಿ.ದೇವೇಂದ್ರಪ್ಪ ಜನತೆಗೆ ಕರೆ ನೀಡಿದರು.ಪಟ್ಟಣದ ಈಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯ ಮೂಲಕ ಭಾಗವಹಿಸಿ ಅವರು ಮಾತನಾಡಿದರು.ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ವಾಗಿದ್ದು, ಒಬ್ಬರ ಸ್ವತ್ತನಿಂದ ಬಂದುದ್ದಲ್ಲ. ಸಾಮಾನ್ಯರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಜಗಳೂರಿನಲ್ಲಿ 2018 ರ ಚುನಾವಣೆ ಮರಕಳಿಸಬಾರದು ಅಂತವರಿಗೆ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಪಾಠ ಕಲಿಸಬೇಕೆಂದು ಮನವಿ ಮಾಡಿದರು. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ನನಗೆ ಎದುರಾಳಿ ಬಿಜೆಪಿ ಅಭ್ಯರ್ಥಿಯೇಹೊರತೂ ಪಕ್ಷೇತರ ಅಭ್ಯರ್ಥಿಯಲ್ಲ ಎಂದು ಪರ್ತಕತ್ರರ ಪ್ರಶ್ನೆಗೆ ಉತ್ತರಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಪಟ್ಟಣದ ಈಶ್ವರ ದೇವಸ್ಥಾನ, ಮಾರಮ್ಮನ ದೇವಸ್ಥಾನದಲ್ಲಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮುಖಂಡರುಗಳೊಂದಿಗೆ ಪೂಜೆ ಸಲ್ಲಿಸಿ, ಸಾವಿರಕ್ಕೂ ಅಧಿಕ ಅಭಿಮಾನಿಗಳು, ಕಾರ್ಯಕರ್ತರು, ಕಾಂಗ್ರೆಸ್ ಬ್ಯಾನರ್‌ಗಳೊಂದಿಗೆ ವಾದ್ಯ ವೃಂದ, ಕಹಳೆ, ತಮ್ಮ ನಾಯಕನಿಗೆ ಜಯಕಾರ ಹಾಕುತ್ತಾ ಅದ್ದೂರಿ ಮೆರವಣಿಗೆ ನಡೆಸಿದರು. ತಮ್ಮ ನೆಚ್ಚಿನ ನಾಯಕನಿಗೆ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಲಾಯಿತು.ಮೆರವಣಿಗೆಯ ನಂತರ ಕಾಂಗ್ರೆಸ್ ಅಭ್ಯರ್ಥಿ  ಬಿ. ದೇವೇಂದ್ರಪ್ಪ.ಚುನಾವಣಾ ಅಧಿಕಾರಿ ಎಸ್. ರವಿ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಸಂತೋಷ್ ಕುಮಾರ್ ಜಿ ಅವರಿಗೆ  ನಾಮ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ-ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಶೀರ್‌ಅಹಮ್ಮದ್. ಕಮತಳ್ಳಿ ಮಂಜುನಾಥ್ ಕ್ಷೇತ್ರದ ಉಸ್ತುವಾರಿ ಕಲ್ಲೇಶ್‌ರಾಜ್‌ ಪಟೇಲ್, ಪುಷ್ಪ ಲಕ್ಷ್ಮಣ ಸ್ವಾಮಿ. ಪಿ.ಸುರೇಶ್‌ಗೌಡ, ಸೇರಿದಂತೆ ಅನೇಕ ಮುಖಂಡರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು